ಶಾಸಕರ ದುರಾಡಳಿತಕ್ಕೆ ಬೇಸತ್ತು ಬೇರೆ ಜಿಲ್ಲೆಗಳತ್ತ ವಲಸೆ ಹೋಗುತ್ತಿರುವ ಯಾದಗಿರಿಯ ಗುತ್ತಿಗೆದಾರರು
ದಕ್ಷ ಪೊಲೀಸ್ ಅಧಿಕಾರಿ ಪರಶುರಾಮ್ ಅವರ ಸಾವಿನ ಪ್ರಕರಣದಲ್ಲಿ ಲಂಚ ಬೇಡಿಕೆ ಹಾಗೂ ಅಧಿಕಾರಿಗೆ ಮಾನಸಿಕ ಕಿರುಕುಳದ ಆರೋಪಿಗಳಾಗಿರುವ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರವರು ಶೀಘ್ರವೇ ರಾಜೀನಾಮೆ ನೀಡಬೇಕು,ಮೊದಲೇ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಯಾದಗಿರಿಯಲ್ಲಿ ಇಂತಹ ಭ್ರಷ್ಟ ಶಾಸಕರು ಅಧಿಕಾರ ನಡೆಸುವ ಯಾವ ನೈತಿಕತೆಯನ್ನು ಹೊಂದಿಲ್ಲ. ಕೇವಲ ಸರ್ಕಾರದ ಅಧಿಕಾರಿಗಳು ಮಾತ್ರವಲ್ಲದೇ ಗುತ್ತಿಗೆದಾರರ ಹತ್ತಿರವು ಶೇಕಡ 15% ಕಮಿಷನ್ ಕೇಳಿರುವ ಆರೋಪವು ಶಾಸಕರ ಮೇಲಿದೆ, ಅದೇ ರೀತಿಯಲ್ಲಿ ಸರ್ಕಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಇಂಜಿನಿಯರ್, ಎಫ್ ಡಿ ಸಿ, ಎಸ್ ಡಿ ಸಿ, ಸೇರಿದಂತ ಅನೇಕ ಅಧಿಕಾರಿಗಳಿಗೂ ಶೇಕಡ 18% ಕಮಿಷನ್ ನೀಡಿ, ನಂತರ ಸರ್ಕಾರಕ್ಕೂ ಶೇಕಡ 18 % GST ನೀಡಿದಾಗ ಗುತ್ತಿಗೆದಾದರು ಕೆಲಸ ನಿರ್ವಹಿಸಲು ಸಾಧ್ಯವೇ?
ಈ ಕಾರಣದಿಂದಾಗಿ ಯಾದಗಿರಿ ಮತಕ್ಷೇತ್ರದ ಗುತ್ತಿಗೆದಾರರು ತುಮಕೂರು, ಬೆಂಗಳೂರು, ಮೈಸೂರು, ಕೋಲಾರ ಜಿಲ್ಲೆಗಳತ್ತ ತೆರಳಿ ಕಾಮಗಾರಿಗಳನ್ನು ಮಾಡುವ ಪಜೀತಿಗೆ ಸಿಲುಕಿದ್ದಾರೆ ಈ ಕಾರಣದಿಂದಾಗಿ ಯಾದಗಿರಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಅಷ್ಟೇ ಅಲ್ಲದೇ,ತಂದೆಯ ಅಧಿಕಾರವನ್ನು ಮಗನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಕಾನೂನನ್ನ ಉಲ್ಲಂಘನೆ ಮಾಡಿದ್ದಾರೆ. ತಮ್ಮದೇ ಸರ್ಕಾರ ಎಂಬ ಅಮಲಿನಲ್ಲಿ ತಮ್ಮ ಅಧಿಕಾರವನ್ನ ಯದ್ವಾ-ತದ್ವ ದುರುಪಯೋಗ ಮಾಡಿಕೊಳ್ಳುತ್ತಿರುವ ಶಾಸಕರಿಗೆ ನಮ್ಮದೊಂದು ಧಿಕ್ಕಾರವಿದೆ. ಕೂಲಂಕುಶವಾಗಿ ಪಿಎಸ್ಐ ರವರ ಸಾವಿನ ಪ್ರಕರಣದ ತನಿಖೆಯಾಗಬೇಕು. ಭ್ರಷ್ಟಶಾಸಕರು ಎಂಬ ಅಪಕೀರ್ತಿಗೆ ಸಾಕ್ಷಿಯಾದ ಶಾಸಕರು ಶೀಘ್ರವೇ ರಾಜೀನಾಮೆ ನೀಡಬೇಕೆಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಬಿ. ಎನ್. ವಿಶ್ವನಾಥ್ ನಾಯಕರವರು ಒತ್ತಾಯಿಸಿದ್ದಾರೆ.
ವರದಿ: ಶಿವರಾಜ ಸಾಹುಕಾರ್ ವಡಗೇರಾ