ಪಾವಗಡ:ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿಯಾದ ಇಂದ್ರಾಣಮ್ಮ ತಿಳಿಸಿದರು.
ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟವನ್ನು
ತಾಲ್ಲೂಕಿನ ನಿಡಗಲ್ ಹೋಬಳಿ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ 2024-25 ನೇ ಸಾಲಿನ ನೀಡಗಲ್ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡಾಕೂಟಗಳು ನಡೆಯಬೇಕಾದರೆ ಗ್ರಾಮಸ್ಥರ ಸಹಕಾರ ಅತಿ ಮುಖ್ಯವಾಗಿರುತ್ತದೆ.ಇಲ್ಲಿಗೆ ಬಂದಿರುವ ಎಲ್ಲಾ ಶಾಲೆಯ ಮಕ್ಕಳಿಗೂ ಒಂದೇ ರೀತಿಯ ಸಹಕಾರ ನೀಡಬೇಕು.
ಈ ಕ್ರೀಡಾಕೂಟವು ವಿದ್ಯಾರ್ಥಿ ಜೀವನದಲ್ಲಿ ಬರುವ ಮೊದಲನೇ ಕ್ರೀಡಾಕೂಟ ಇದಾಗಿರುತ್ತದೆ ಆದ್ದರಿಂದ ಮಕ್ಕಳು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಗೆಲುವು ಮುಖ್ಯವಲ್ಲ. ಮುಖ್ಯವಾಗಿ ದೈಹಿಕ ಶಿಕ್ಷಕರಾದ ತೀರ್ಪುಗಾರರು ಉತ್ತಮವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ನೀವು ನೀಡುವ ತೀರ್ಪು ಪಂದ್ಯದ ಗತಿಯನ್ನೇ ಬದಲಾಯಿಸುತ್ತದೆ. ಆದ್ದರಿಂದ ನ್ಯಾಯಯುತವಾದ ತೀರ್ಪನ್ನು ನೀಡಿದರೆ ಮಾತ್ರ ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಆದ್ದರಿಂದ ತೀರ್ಪುಗಾರರು ಕ್ರೀಡಾ ಮನೋಭಾವದಿಂದ ನಿಷ್ಪಕ್ಷಪಾತವಾದ ತೀರ್ಪನ್ನು ನೀಡುವುದರ ಮೂಲಕ ಎಲ್ಲಾ ಶಾಲೆಯ ಮಕ್ಕಳನ್ನು ಸಮನಾಗಿ ಕಾಣಬೇಕು ಹಾಗೂ ಅಲ್ಲಲ್ಲಿ ಡೆಂಗ್ಯೂ ಕಾಣಿಸಿಕೊಂಡಿರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಷಾರಾಣಿ ಅಶೋಕ್, ಸದಸ್ಯರಾದ ಉಜ್ಜೀನಪ್ಪ, ನಾಗರತ್ನಮ್ಮ ಶಿಲ್ಪಾಚಾರಿ, ಬಿಆರ್ ಸಿ ವೆಂಕಟೇಶ್, ಎಡಿಎಂ ಶಂಕ್ರಪ್ಪ, ಇಸಿಒ ರಂಗನಾಥ್, ಖಾಜಾ ಹುಸೇನ್, ಸಿಆರ್‌ಪಿ ಮೂರ್ತಿ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್,
ಮುಖ್ಯ ಶಿಕ್ಷಕರಾದ ರಾಮಕೃಷ್ಣಪ್ಪ, ಸುಧಾ,ಎಸ್ ಡಿ ಎಂ ಸಿ ಅಧ್ಯಕ್ಷರಾದ ಪಿಸಿ ನಾಗೇಂದ್ರ ನಿವೃತ್ತಿ ಶಿಕ್ಷಕರಾದ ನಾಗಣ್ಣ, ರಾಮಜನಪ್ಪ ಕೃಷ್ಣಪ್ಪ ಜಗದೀಶ್ ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.
ವರದಿ:ಕೆ.ಮಾರುತಿ ಮುರಳಿ