ಕೊಪ್ಪಳ:ಕಾನೂನು ಜ್ಞಾನ,ಅರಿವು ಎಲ್ಲರಿಗೂ ಇರಬೇಕೆಂದು ಕೊಪ್ಪಳದ ಖ್ಯಾತ ವಕೀಲರಾದ ಶ್ರೀ ಮತಿ ಕಾಳಮ್ಮ ಈಶಪ್ಪ ಪತ್ತಾರ ಹೇಳಿದರು.
ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ ರವಿವಾರದಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್. ಎಸ್ ವಾರ್ಷಿಕ ವಿಶೇಷ ಶಿಬಿರದ ಆರನೇ ದಿನದ ಮಹಿಳೆಯರು ಮತ್ತು ಕಾನೂನು ಗಳು ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಮಹಿಳೆಯರು ಶಿಕ್ಷಣ ಪಡೆದರೆ ಅಹಿತಕರ ಘಟನೆಗಳನ್ನು ತಡೆಘಟ್ಟಬಹುದು. ಸಂತಸದ ಜೀವನ ನಡೆಸಬಹುದು.ಮಗು ಜನಾಂದಿಂದ ಮರಣದವರೆಗೂ ಎಲ್ಲರಿಗೂ ಒಂದಲ್ಲ ಒಂದು ರೀತಿ ಕಾನೂನು ಚೌಕಟ್ಟಿನೊಳಗೆ ಬಂದೇ ಬರುತ್ತಾರೆ. ತಂದೆ ಅಸ್ತಿಯಲ್ಲಿ ಮಹಿಳೆಯರಿಗೆ ಸಮವಾದ ಪಾಲು ಇದೆ. ಸಂವಿಧಾನ, ಕಾನೂನು ಪ್ರಕಾರ ಎಲ್ಲರೂ ಸಮಾನರು. ವಿವಾಹ ಅಂದ್ರೆ ಕೇವಲ ತಾಳಿ ಕಟ್ಟುವುದು ಅಷ್ಟೇ ಅಲ್ಲ. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವುದು. ಸಪ್ತ ಪದಿ ತುಳಿಯುವುದು. ದಾಂಪತ್ಯ ಜೀವನದಲ್ಲಿ ಸ್ವಲ್ಪ ಬಿರುಕು ಬಿಡಬಾರದು. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಈಗಿನ ಕಾಲಕ್ಕೂ ಅನುಗುಣವಾಗಿ ಪ್ರಕರಣಗಳು ತ್ವರಿತವಾಗಿ ವಿಲೇವಾರಿ ಆಗಲು ಕಾನೂಗಳು ಬದಲಾಗಿವೆ. ವಿದ್ಯೆಗೂ ಬುದ್ದಿಗೂ ನಂಟು ಇರಬೇಕು. ಆಗ ಮಾತ್ರ ಜೀವನದಲ್ಲಿ ಸುಖ ಇರುತ್ತದೆ. ಮಹಿಳೆಯರು ಆಕರ್ಷಣೆಗೆ ಒಳಗಾಗಬಾರದು. ಸಮಾಜವೆಂದರೆ ನಾವು ನೀವು ಇರುವುದೇ ಸಮಾಜ. ನಾವು ಸ್ವಾಸ್ಥ ಸಮಾಜ ನಿರ್ಮಾಣ ಮಾಡಬೇಕು. ಹಿರಿಯ ನಾಗರಿಕಗೂ ಸಹಾಯಕ್ಕಾಗಿ ಕಾನೂನುಗಳು ಇವೆ. ಮಹಿಳೆಯರಿಗೆ ಸರ್ಕಾರವು ಉಚಿತವಾದ ಕಾನೂನು ಸಲಹೆಗಳ್ಳನ್ನು ನೀಡುತ್ತದೆ ಅವುಗಳನ್ನು ನೀವು ಉಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿರುವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿ ಮಾತನಾಡುತ್ತ ಮಹಿಳೆಯರು ಶಿಕ್ಷಣ ಪಡೆದು ಇಂದು ಸಾಕಷ್ಟು ಕ್ಷೆತ್ರಗಳಲ್ಲಿ ಮುಂದುವರೆದಿದ್ದಾರೆ. ಮಹಿಳೆಯರ ಪರವಾಗಿರುವ ಕಾನೂನುಗಳ್ಳನ್ನು ಉಪಯೋಗ ಮಾಡಿಕೊಳ್ಳಬೇಕು.
ಈ ಶಿಬಿರಗಳಲ್ಲಿ ಒಳ್ಳೆಯ ಅಂಶಗಳನ್ನು ಕಲಿಯಿರಿ ಎಂದು ತಿಳಿಸಿದರು.
ಇನ್ನೊಬ್ಬ ಅತಿಥಿಯಾಗಿರು ಬಸವರಾಜ್ ಅವರು ಈ ಶಿಬಿರಗಳಿಂದ ನಿಮ್ಮ ಜೀವನದ ಓಳ್ಳೆಯ ವಿಚಾರಗಳನ್ನು ಕಲಿಯಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಭೋಗೋಳಶಾಸ್ತ್ರದ ಉಪನ್ಯಾಸಕ ಕಲ್ಲಯ್ಯ ಪೂಜಾರ್ ಮಾತನಾಡಿ ಶ್ರಮ ಪಟ್ಟು ವಿದ್ಯಭ್ಯಾಸ ಮಾಡಿ. ವಿದ್ಯಾರ್ಥಿ ಜೀವನ ಬಹಳ ಅತ್ಯುಮಲ್ಯವಾದದ್ದು. ಶ್ರೇಷ್ಠ ತತ್ವಜ್ಞಾನಿಗಳ ಜೀವನ ಚರಿತ್ರೆಗಳನ್ನು ಓದಬೇಕು. ಆಗ ಜೀವನದಲ್ಲಿ ಒಳ್ಳೆಯ ಸ್ಥಾನ ಸಿಗುತ್ತವೆ. ಹಗಲು ರಾತ್ರಿ ಎನ್ನದೇ ವಿದ್ಯಾಭ್ಯಾಸ ಮಾಡಿ. ಎಲ್ಲರಿಗೂ ಒಂದು ಅವಕಾಶi ಸಿಕ್ಕೇ ಸಿಗುತ್ತದೆ. ಅದನ್ನು ಉಪಯೋಗ ಮಾಡಿಕೊಳ್ಳಬೇಕು. ಶ್ರಮ ಪಟ್ಟು ಓದಿದ್ರೆ ಸರಕಾರಿ ಉದ್ಯೋಗ ಸಿಗುತ್ತದೆ. ವಿದ್ಯಾರ್ಥಿಗಳು ಜಾಣನಾಗಿದ್ರೆ ನಿನಗೆ ಒಳ್ಳೆಯ ಜೀವನ ಸಿಗುತ್ತದೆ ಎಂದರು.
ವೇದಿಕೆಯಲ್ಲಿ ಶಿವಪ್ಪ ಬಡಿಗೇರ್, ಶ್ರೀ ಮತಿ ಪದ್ಮಾವತಿ ಬಸವರಾಜ, ಮೌಲಾಲಿ ಇದ್ದರು.
ಕಾರ್ಯಕ್ರಮವನ್ನು ಶ್ರೀದೇವಿ ನಿರೂಪಿಸಿದರು, ಗಂಗಮ್ಮ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶಾರದಾ ಸ್ವಾಗತಿಸಿದರು, ಹುಲಿಗೆಮ್ಮ ವಂದಿಸಿದರು.