ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಐತಿಹಾಸಿಕ ಕೋಟೆ ಕೊತ್ತಲೆಗಳು ವಿನಾಶದ ಅಂಚನ್ನು ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.
ಪಟ್ಟಣದಲ್ಲಿ ಅನೇಕ ರಾಜರು ಮಹಾರಾಜರು ಮನೆತನಗಳು ಆಳ್ವಿಕೆ ನಡೆಸಿ ಹೋಗಿರುವಂತಹ ಐತಿಹಾಸಿಕ ಸ್ಥಳವನ್ನು ತಮ್ಮ ಸ್ವಾರ್ಥಕ್ಕಾಗಿ ನಾಶ ಮಾಡುತ್ತಿರುವುದು ಕಂಡು ಬಂದಿದೆ.
ಕೋಟೆ ಕೊತ್ತಲಗಳು ಬಿದ್ದಿರುವಂತ ಘಟನೆ ನಡೆದಿದೆ
ಪೋಸ್ಟ್ ಆಫೀಸ್ ಪಕ್ಕದಲ್ಲಿ ಇರುವಂತ ಕೋಟೆಯನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡು ಐತಿಹಾಸಿಕ ಕೋಟೆಗಳನ್ನು ಧ್ವಂಸ ಮಾಡಿ ಮನೆಗಳನ್ನು ಆಸ್ಪತ್ರೆಗಳನ್ನು ನಿರ್ಮಾಣ ಮಾಡಿಕೊಂಡು ಹಳೆಯ ಸ್ಮಾರಕ ಕೋಟೆಗಳನ್ನು ನಾಶ ಮಾಡುತ್ತಿದ್ದಾರೆ.ಆದರೆ ಯಾವುದೇ ರೀತಿಯಾದಂತಹ ಪುರಾತತ್ವ ಅಧಿಕಾರಿಗಳಾಗಿರಲಿ ಜನಪ್ರತಿನಿಧಿಗಳಾಗಿರಲಿ ಈ ಕೋಟೆಯ ರಕ್ಷಣೆ ಮಾಡುವುದರಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.
ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಕೋಟೆ ಕೊತ್ತಲುಗಳನ್ನು ಆಕ್ರಮಿಸಿಕೊಂಡು ಅವುಗಳನ್ನು ಕಣ್ಮರೆ ಮಾಡುತ್ತಿದ್ದಾರೆ ಅದರಿಂದ ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಕೋಟೆ ಕೊತ್ತಲುಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಣೆ ಮಾಡಬೇಕೆಂದು ಸಾರ್ವಜನಿಕರ ಆಗ್ರಹವನ್ನು ವ್ಯಕ್ತಪಡಿಸುತ್ತಿದ್ದಾರೆ.
ಪುರಸಭೆಯ ಅಧಿಕಾರಿಗಳು ಯಾವುದೇ ಕಟ್ಟಡಗಳನ್ನು ಕಟ್ಟಲು ಪರವಾನಗಿ ಕೊಡುವಾಗ ಸ್ಥಳ ಪರಿಶೀಲಿಸಿ ನಿಯಮಾನುಸಾರ ಕಟ್ಟಡ ನಿರ್ಮಾಣ ಮಾಡಬೇಕೆಂದು ತಿಳಿಸಬೇಕಾಗಿದೆ, ಆದರೆ ಪುರಸಭೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ ಇರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತವೆ
ಪುರಸಭೆ ನಿರ್ಲಕ್ಷ್ಯದಿಂದಾಗಿ ಕೋಟೆ ಕೊತ್ತಲೆಗಳು ವಿನಾಶದ ಹಂತ ತಲಪುತ್ತಿವೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.
ವರದಿ :ಕೆ.ಮಾರುತಿ ಮುರಳಿ