ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ,ಎಲೆ ಮಡಲು ,ಹೇರೂರು,ತಲಮಕ್ಕಿ ಶಾಲೆ,ಸ್ಥಿರೂರು ಮತ್ತು ಹೆದ್ಸೆ ಶಾಲೆಗಳನ್ನೊಳಗೊಂಡ 150 ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಯುತ ಪಾಟೀಲ್ ಸರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ನ ಕಾರ್ಯಕ್ರಮಗಳ ವ್ಯವಸ್ಥಾಪಕರಾದ ಶ್ರೀಮತಿ ರೇಷ್ಮಾ ,ಎಸ್.ಡಿ. ಎಂ. ಸಿ.ಅಧ್ಯಕ್ಷರಾದ ಸತೀಶ್, ಉಪಾಧ್ಯಕ್ಷರಾದ ಮಮತ, ಸದಸ್ಯರು, ಗ್ರಾಮಸ್ಥರು, ಮಕ್ಕಳು ಮತ್ತು ಮುಖ್ಯಗುರುಗಳಾದ ಶ್ರೀಮತಿ ಮಮತಾ ಮೇಡಂ ರವರು ಉಪಸ್ಥಿತರಿದ್ದರು. ಈ ಯೋಜನೆ ಕುರಿತು ಚೌಡ್ಲಾಪುರ ಸೂರಿ (ಸಿ.ಆರ್. ಸುರೇಶ್)ಶಿಕ್ಷಕರು ವಿವರಣೆ ನೀಡಿದರು.
ಇದೊಂದು ವಿಶೇಷ ಯೋಜನೆಯಾಗಿದ್ದು ಇದರಡಿಯಲ್ಲಿ ವಾರಕ್ಕೆ 4 ದಿನಗಳು ಪೌಷ್ಟಿಕ ಆಹಾರ ನೀಡಲಾಗುತ್ತದೆ. ಒಂದನೇ ದಿನ ತೆಂಗಿನ ಕಾಯಿ ಲಾಡು, ಎರಡನೇ ದಿನ ಸಿರಿ ಧಾನ್ಯಗಳ ಲಾಡು, ಮೂರನೇ ದಿನ ಶೇಂಗಾ ಬರ್ಫಿ ಮತ್ತು ನಾಲ್ಕನೇ ದಿನ ಯಾವುದಾದರೊಂದು ಹಣ್ಣು.
ಇಂತಹ ಮಹಾನ್ ಕಾರ್ಯಕ್ಕೆ ಅವಕಾಶ ನೀಡಿ ಮಕ್ಕಳ ಆರೋಗ್ಯವನ್ನು ಪ್ರೀತಿಸುವ ಡಚ್ ವ್ಯೂವ್ ಹಾಗೂ ನಗು ಫೌಂಡೇಶನ್ ಪ್ರವರ್ತಕರಾದ ಶ್ರೀಮತಿ ದೀಪ್ತಿ ಮೇಡಂ ರವರಿಗೆ ಎಲ್ಲಾ ಶಾಲೆಗಳ ಗ್ರಾಮಸ್ಥರು ಅಭಿನಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.