ವಿಜಯಪುರ/ತಾಳಿಕೋಟೆ: ಆರೋಗ್ಯವಂತ ದೇಹದಲ್ಲಿ ಮಾತ್ರ ಉತ್ತಮ ಮನಸ್ಸು ಇರಲು ಸಾಧ್ಯ, ಕ್ರೀಡೆಯಿಂದ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ವಿಕಸನ ಸಾಧ್ಯವಾಗುತ್ತದೆ ವಿದ್ಯಾರ್ಥಿಗಳ ಜೀವನದಲ್ಲಿ ಪಾಠ ಮತ್ತು ಆಟ ಎರಡೂ ಇರುವುದು ಅಗತ್ಯವಾಗಿದೆ ಎಂದು ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು. ತಾಲೂಕಿನ ಬಳಗಾನೂರ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಹಾಗೂ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳು ಕಾರ್ಯಾಲಯ ಮುದ್ದೇಬಿಹಾಳ ಸಮೂಹ ಸಂಪನ್ಮೂಲ ಕೇಂದ್ರ ಮಿಣಜಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಮಿಣಜಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ 2024-2025 ನೇ ಸಾಲಿನ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಕ.ಸಾ.ಪ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಈ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಕ್ರೀಡೆಗಳಿಗೂ ಮಹತ್ವವನ್ನು ನೀಡುತ್ತಿರುವುದು ಸಂತೋಷದ ವಿಷಯವಾಗಿದೆ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಆಸಕ್ತಿಯಿಂದ ಭಾಗವಹಿಸುವುದು ಮುಖ್ಯವಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ. ವಜ್ಜಲ್ ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ಗಣ್ಯರಾದ ಆನಂದಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ಮಿಣಜಗಿ ಕ್ಲಸ್ಟರ್ ವ್ಯಾಪ್ತಿಯ 10 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಚಂದ್ರಶೇಖರ ಅಲದಿ,ಬಸವರಾಜ ಡೋರನಹಳ್ಳಿ,ಅಮರೇಶ ಪಾಟೀಲ,ಬಸವರಾಜ ಜೀರಲಭಾವಿ,ರಾಜು ವಡ್ಡರ, ಎಸ್ ಡಿ ಎಂ ಸಿ ಸದಸ್ಯರಾದ ಭೀಮನಗೌಡ ಬಿರಾದಾರ, ಮಲ್ಲಿಕಾರ್ಜುನ ಬೋರಗಿ,ಸಿದ್ದು ಕಾನ್ನಾಳ, ಪ್ರಭುಗೌಡ ಪಾಟೀಲ,ಶಿವಣ್ಣ ಕಡಕೋಳ,ವೀರೇಶ್ ಬಾಗೇವಾಡಿ,ಇಸಿಓ ಡಿ.ವೈ. ಗುರಿಕಾರ,ಸಿ.ಆರ್. ಸಿ. ಬಾಲಾಜಿ ಬಿಜಾಪೂರ,ಮುಖ್ಯ ಶಿಕ್ಷಕ ಆರ್. ಎಂ.ಮುರಾಳ, ಸಿ.ಎಸ್. ರೆಡ್ಡಿ ,ಎಸ್.ಆರ್. ವಾಲಿಕಾರ್, ಎಂ.ಬಿ. ಮಡಿವಾಳರ,ಬಿ.ಸಿ.ಮಸರಕಲ್, ಬಿ.ಐ.ಗಣಿಯಾರ, ಆರ್.ಎಸ್. ವಾಲಿಕಾರ,
ಜಿ.ಆರ್. ಸೋನಾರ, ಮಡಿವಾಳಮ್ಮ ನಾಡಗೌಡ ಇದ್ದರು.
ವರದಿ:ಉಸ್ಮಾನ ಬಾಗವಾನ