ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಜಿಗೇನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾಪನೆ ಕಳಸಾರೋಹಣ ಗರುಡಗಂಬ ಸ್ಥಾಪನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಈ ಕಾರ್ಯಕ್ರಮದ ಪ್ರಯುಕ್ತ ಧಾರ್ಮಿಕ ನಿಯಮಾನುಸಾರ ಗ್ರಾಮದಲ್ಲಿ ಗಂಗೆ ಪೂಜೆ, ಕುಂಭಮೇಳ, ಹೋಮ ಹವನ ಜರುಗಿದವು.ಈ ಸಂದರ್ಭದಲ್ಲಿ ವೀರಗಾಸೆ ಭದ್ರಕಾಳಿ ಮಕ್ಕಳ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಮಾನ್ಯ ಲೋಕಸಭಾ ಸದಸ್ಯರಾದ ಈ ತುಕಾರಾಂ ,ಮಾಜಿ ಮಂತ್ರಿಗಳಾದ ಶ್ರೀ ರಾಮುಲು, ಕೆ ಎಸ್ ದಿವಾಕರ್ ಮುಖಂಡರಾದ ಪಿ.ಜಯರಾಮ್ ಹಿರೇಮಠ ಸ್ವಾಮಿ ಗ್ರಾಮದ ಮುಖಂಡರು ಹಿರಿಯರು ಸಮಿತಿಯ ಸದಸ್ಯರು ಯುವಕರು ಸಾವಿರಾರು ಸಂಖ್ಯೆ ಭಕ್ತರು ಇದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪೂಜಾ ಸಮಯಕ್ಕೆ ಭಜರಂಗಿ ಪ್ರತ್ಯಕ್ಷ.!?-ಆಂಜನೇಯನ ಗೋಪುರ ಪೂಜೆ ಹಾಗೂ ಮೂರ್ತಿ ಪೂಜೆ ಜರುಗುವ ಸಂದರ್ಭದಲ್ಲಿ, ಇದ್ದಕ್ಕಿದ್ದ ಹಾಗೇಯೆ ಎಲ್ಲಿಂದಲೋ ಕೋತಿಯೊಂದು ದಿಢೀರ್ ಆಗಮಿಸಿ ನೆರದವರನ್ನ ಚಿಕಿತಗೊಳಿಸಿತು.ಆ ಕ್ಷಣ ಭಕ್ತರೆಲ್ಲರೂ ಒಂದು ಕ್ಷಣ ಪುಳಕಿತರಾದರು, ನೆರೆದ ಅಸಂಖ್ಯಾತ ಭಕ್ತರು ಭಕ್ತಿಯ ಭಾವಪರವಶರಾಗಿ ಹರ್ಷದೊಂದಿಗೆ ಮುಗಿಲು ಮಟ್ಟುವ ಹಾಗೆ ಜಯ ಘೋಷ ಕೂಗಿದರು. ಪೂಜಾ ಸಮಯದಲ್ಲಿ ದೇವಸ್ಥಾನದ ಮೇಲೆ ದಾವಿಸಿ ಧ್ವಜ ಸ್ಥಂಭ ಇದು ಕಾಕತಾಳೆಯೋ ಪವಾಡವೋ ತಿಳಿಯದಾಯಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.