ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಿಗ್ಗಾಂವ್ ಗ್ರಾಮದ ಡಿ.ಎ.ವಿ ಓರಿಯಂಟ್ ಜ್ಞಾನ ಮಂದಿರ ಶಾಲೆಯಲ್ಲಿ ಸಂಪ್ರದಾಯ ಬದ್ಧವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಡಾ.ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದ್ವೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
5ನೇ ಮತ್ತು 6ನೇ ತರಗತಿಯ ವಿದ್ಯಾರ್ಥಿಗಳು ಸ್ವಾಗತ ಗೀತೆಯನ್ನು ಹಾಡಿದರು. 7ನೇ ಮತ್ತು 8ನೇ ತರಗತಿಯ ವಿದ್ಯಾರ್ಥಿನಿಗಳಿಂದ ಭರತನಾಟ್ಯ ನೃತ್ಯವು ಪ್ರದರ್ಶಿಸಲಾಯಿತು.ಕುಮಾರಿ ಸುಹಾಸಿನಿ (8ನೇ ತರಗತಿ) ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದಳು. ಶ್ರೀ ಅವಿನಾಶ್ ಸಿಂಗಾರೆ ಇಂಗ್ಲೀಷ್ ಶಿಕ್ಷಕರು ಶಿಕ್ಷಕರ ಕರ್ತವ್ಯಗಳ ಬಗ್ಗೆ ಮಾತನಾಡಿದರು. ನಂತರ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಶಾಲು ಹೊದಿಸಿ ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು.
ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ವೈಚಾರಿಕ ಚಿಂತನೆಯನ್ನು ಬೆಳಸಬೇಕು. ವಿಶ್ವಮಟ್ಟದಲ್ಲಿ ಭಾರತ ಎಲ್ಲಾ ರಂಗದಲ್ಲೂ ರಾರಾಜಿಸಬೇಕು. ಭ್ರಷ್ಟಚಾರ ನಿರ್ಮೂಲನೆ ಮುಂಬರುವ ಪೀಳಿಗೆಯ ಜವಾಬ್ದಾರಿಯಾಗಿದೆ. ಈ ಇಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಬೇಕೆಂದು ಓರಿಯಂಟ್ ಸಿಮೆಂಟ್ ಕಂಪನಿಯ ಘಟಕ ಮುಖ್ಯಸ್ಥರಾದ ಶ್ರೀ ಸತ್ಯಬ್ರತ್ ಶರ್ಮಾ ಅವರು ಕಾರ್ಯಕ್ರಮದ ಅತಿಥಿ ಸ್ಥಾನವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಆಳವಡಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶ್ರೀ ಸಜಿಕುಮಾರ್ ಮಾನವ ಸಂಪನ್ಮೂಲ ಮುಖ್ಯಸ್ಥರು ತಮ್ಮ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಡಾ|| ರಾಧಾಕೃಷ್ಣನ್, ಮಹಾತ್ಮಾ ಹಂಸರಾಜ್, ಸ್ವಾಮಿ ದಯಾನಂದ ಸರಸ್ವತಿಯವರ ಛದ್ಮವೇಷವನ್ನು ಧರಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಸುಜಾತಾ ಶರ್ಮಾ, ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಜಿ.ಜ್ಯೋತಿ ಸಂಯೋಜಕರಾದ ಶ್ರೀಮತಿ ಪ್ರೀತಾ ಎಸ್.ಕುಮಾರ್ ಮತ್ತು ಶ್ರೀ ಸುಭಾಷ ರೆಡ್ಡಿ ಉಪಸ್ಥಿತರಿದ್ದರು.
6ನೇ ತರಗತಿಯ ವಿದ್ಯಾರ್ಥಿನಿ ಕು. ಪ್ರಾಚಿ ಚವ್ಹಾಣ್ ಮತ್ತು 7ನೇ ತರಗತಿಯ ವಿದ್ಯಾರ್ಥಿ ಕು. ಶೇಯಸ್ ಪೂಜಾರಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. 10ನೇ ತರಗತಿ ವಿದ್ಯಾರ್ಥಿನಿ ರೇಣುಕಾ ವಂದಿಸಿದರು
ವರದಿ ಮೊಹಮ್ಮದ್ ಅಲಿ ,ಚಿತ್ತಾಪುರ