ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಎಂ.ದಾಸರಹಳ್ಳಿ ಶಾಲೆಯಲ್ಲಿ ಈ ದಿನ ಪ್ರತಿಭಾ ಕಾರಂಜಿ ಕಾರ್ಯಕ್ರಮ ಟಿಪಿ ರಾಜಣ್ಣ ನವರ ಅಧ್ಯಕ್ಷತೆಯಲ್ಲಿ ECO ಮಂಜಪ್ಪ ಸರ್ ಮತ್ತು ಕರಿಯಣ್ಣ ಸರ್ CRP ನಾರಾಯಣ್ ನಾಯಕ್ ಉದ್ಘಾಟನೆ ಮಾಡಿದರು. ECO ಕರಿಯಣ್ಣಸರ್ ಪ್ರತಿಭಾ ಕಾರಂಜಿಯನ್ನು ಕುರಿತು ಶಾಲೆಯ ಮಕ್ಕಳಲ್ಲಿ ಇರ್ತಕಂತ ಪ್ರತಿಭೆಯನ್ನ ತೋರಿಸುವುದಕ್ಕೆ ಇದು ಒಂದು ಸುವರ್ಣ ಅವಕಾಶ ಎಂದು ಹೇಳಿದರು ECO ಮಂಜಪ್ಪ ಅವರು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕುರಿತು ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರ್ತಿಸಲು ಇರುವ ಅವಕಾಶ ಪ್ರತಿಯೊಬ್ಬ ಮಕ್ಕಳಲ್ಲಿಯೂ ಸಹ ಒಂದೊಂದು ರೀತಿಯ ಪ್ರತಿಭೆ ಇರುತ್ತೆ ಆ ಪ್ರತಿಭೆಯನ್ನು ನಾವು ಈ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ಅವರನ್ನ ಗುರುತಿಸಬೇಕು ಎಂದು ಹೇಳಿದರು.
ಈ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮದಲೂರು ಕ್ಲಸ್ಟರ್ ಹಂತದಲ್ಲಿರುವ ಎಲ್ಲಾ ಶಾಲೆಗಳು ಭಾಗವಹಿಸಿದ್ದವು ಒಂದೊಂದು ಶಾಲೆಯ ಮಕ್ಕಳು ಒಂದೊಂದು ರೀತಿಯ ಪ್ರತಿಭೆಗಳನ್ನು ತೋರಿಸುವ ಮೂಲಕ ಗಮನ ಸೆಳೆದರು ಈ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಶಾಲೆಯ ಶಿಕ್ಷಕರಿಗೂ ಮತ್ತು ಮಕ್ಕಳಿಗೂ ಎಂ.ದಾಸರಹಳ್ಳಿ ಶಾಲೆಯ ಮುಖ್ಯ ಶಿಕ್ಷಕರು ಶ್ರೀಮತಿ ರತ್ನಮ್ಮ ಅವರು ಊಟದ ವ್ಯವಸ್ಥೆಯನ್ನು ಮಾಡಿದ್ದರು ಮತ್ತು ಈ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಂ ದಾಸರಹಳ್ಳಿ ಗ್ರಾಮದ ಹಿರಿಯ ನಾಗರಿಕರು ಪೋಷಕರು ಹಾಗೂ ಎಸ್ ಡಿ ಎಂ ಸಿ ಸದಸ್ಯರು ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರು ಹಳೆಯ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಮದಲೂರು ಕ್ಲಸ್ಟರ್ ವ್ಯಾಪ್ತಿಗೆ ಬರುವ ಎಲ್ಲಾ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಹಾಗೂ ಎಂ. ದಾಸರಹಳ್ಳಿ ಗ್ರಾಮದ ಪೋಷಕರು ಹಿರಿಯ ನಾಗರಿಕರು ಮತ್ತು ಮಕ್ಕಳು ಹಾಜರಿದ್ದರು.
ವರದಿ ಕೊಟ್ಟ ಕರಿಯಣ್ಣ