ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳು ಕೈಜೋಡಿಸಿ ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು ಗ್ರಾಮಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಮನರೇಗಾ ಸಂಯೋಜಕ ನಾರಾಯಣ್ ತಿಳಿಸಿದರು.
ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಅವರು ಮಾತನಾಡಿ ನರೇಗಾ ಯೋಜನೆಯಲ್ಲಿ 2024 25 ನೇ ಸಾಲಿನಲ್ಲಿ ಒಟ್ಟು 116 ಅಭಿವೃದ್ಧಿ ಕಾಮಗಾರಿಗಳನ್ನು ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು, ಇದರಿಂದ ಹುತೂರು ಗ್ರಾಮ ಪಂಚಾಯತಿಯಿಂದ 115 ಕಾಮಗಾರಿಗಳನ್ನು ಹಾಗೂ ಸಾಮಾಜಿಕ ಅರಣ್ಯ ವಲಯ ವತಿಯಿಂದ ಒಂದು ಕಾಮಗಾರಿಯನ್ನು ಮಾಡಲಾಗಿದೆ ಇದರಲ್ಲಿ ಸಮುದಾಯ ಕಾಮಗಾರಿ 22, ವೈಯಕ್ತಿಕ ಕಾಮಗಾರಿ 94, ಆಗಿದೆ 49,45 ,084 ರೂ ವೆಚ್ಚದಲ್ಲಿ ಕಾಮಗಾರಿಗಳನ್ನು ಮಾಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗಿದೆ, ಗ್ರಾಮದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಾರ್ವಜನಿಕ ಹಾಗೂ ಗ್ರಾಮಸ್ಥರಿ ಸಹಕಾರ ನೀಡಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜು ಮಾತನಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿಯಾಗಬೇಕೆಂದರೆ ಸಹಕಾರ ಅತ್ಯವಶ್ಯಕ ಆದ್ದರಿಂದ ಗ್ರಾಮಸ್ಥರು ಪಂಚಾಯಿತಿ ಪರವಾಗಿ ಹೆಚ್ಚಾಗಿ ಸಹಕರಿಸಿ ಗ್ರಾಮ ಪ್ರಗತಿಗೆ ಅಧಿಕಾರಿಗಳ ಜೊತೆ ಕೈಜೋಡಿಸಬೇಕೆಂದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಶಿವರಾಜು, (ಮೀನುಗಾರಿಕೆ ಇಲಾಖೆ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಬಾಲಕೃಷ್ಣ ನಾಯಕ, ಸದಸ್ಯರಾದ ವೆಂಕಟ ರಾಮು, ಪುಟ್ಟವೀರ ನಾಯಕ, ಗೌರಿ, ನಾಗರಾಜ, ಶಿವಶಂಕರ್, ಮಾದೇವಸ್ವಾಮಿ ,ಬಸುರಾಜು, ಮಾದೇವ ,ಮಹೇಶ್,ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್