ಸಿಂಧನೂರಿನ ಪೋಲಿಸ್ ಇಲಾಖೆಯ ವಸತಿ ಗೃಹಗಳ ಆವರಣದಲ್ಲಿ ನಗರೀಕರಣಕ್ಕಾಗಿ ಕಟ್ಟಡಗಳನ್ನು ನಿರ್ಮಿಸಲು ಸುಮಾರು25 ರಿಂದ30 ವರ್ಷಗಳ ಸುಮಾರು 14 ಮರಗಳ ಮಾರಣ ಹೋಮ ಮಾಡಲು(ಕಡಿದು ಹಾಕಲು)ಗುತ್ತಿಗೆದಾರರ ಜೊತೆಗೂಡಿ ಅರಣ್ಯ ಅಧಿಕಾರಿಗಳು ಬೃಹತ್ತಾಗಿ ಬೆಳೆದ ಮರಗಳಿಗೆ ಅಂಕಿ ಸಂಖ್ಯೆಗಳನ್ನು ಹಾಕಿರುವುದುನ್ನು ಕಂಡು ಈ ಮರಗಳನ್ನು ಕಡಿಯಲು ಮುಂದಾದರೆ ಅಪ್ಪಿಕೋ ಚಳುವಳಿ ಹಮಿಕೊಳ್ಳಲಾಗುವುದು ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಅವರು ನಗರೀಕರಣದಿಂದಾಗಿ ಇತ್ತೀಚೆಗೆ ಬೃಹತ್ತಾಗಿ ಬೆಳೆದ ಮರಗಳನ್ನು ಕಡಿಯುತ್ತಿರುವುದು ಒಂದು ದುರದೃಷ್ಟಕರ ಸಂಗತಿಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇಂತಹ ಬೃಹತ್ತಾಗಿ ಬೆಳೆದ ಮರಗಳನ್ನು ಕಡಿಯಲು ಅನುಮತಿ ನೀಡುತ್ತಿರುವುದು ವಿಪರ್ಯಾಸವೇ ಸರಿ ಮರಗಳನ್ನು ಕಡಿಯುವ ಯಾವುದೇ ಅಧಿಕಾರಿಗಳಾಗಿರಲಿ ಗುತ್ತಿಗೆದಾರರಾಗಿರಲಿ 1 ಮರಕ್ಕೆ 21 ಗಿಡಗಳನ್ನು ನೆಟ್ಟು 3 ವರ್ಷಗಳವರೆಗೆ ಪಾಲನೆ ಪೋಷಣೆ ಮಾಡುವಂತೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟರೆ ಮಾತ್ರ ಅನುಮತಿ ನೀಡಬೇಕು ಇಲ್ಲದಿದ್ದರೆ ಮರಗಳ ಮಾರಣ ಹೋಮ ಮಾಡುವಾಗ ಅರಣ್ಯ ಅಧಿಕಾರಿಗಳು ವಿರುದ್ಧವಾಗಿ ಎಲ್ಲಾ ಪರಿಸರ ಪ್ರೇಮಿಗಳು ಸೇರಿ ಮರಗಳನ್ನ ಅಪ್ಪಿಕೊಂಡು ಅಪ್ಪಿಕೋ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.