ಮೈಸೂರು: ಮಂಡ್ಯದಲ್ಲಿ ನಡೆಯುವ ಅಖಿಲಾ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲತಾ ರಾಜಶೇಖರ್ ರವರನ್ನು ಅಧ್ಯಕ್ಷರಾಗಿ ನೇಮಿಸಬೇಕೆಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ನಡೆಯುವ ಅಖಿಲಾ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷತೆಯನ್ನು ಕವಯತ್ರಿ ಲತಾ ರಾಜಶೇಖರ ಅವರನ್ನು ಸರ್ಕಾರ ಆಯ್ಕೆ ಮಾಡಬೇಕು ಎಂದು ತೇಜಸ್ವಿ ಆಗ್ರಹಿಸಿದ್ದಾರೆ.
ಲತಾ ರಾಜಶೇಖರ್ ರವರು ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯವರು.
ಇವರು ಹುಟ್ಟಿದ್ದು 1954 ಆಗಸ್ಟ್ 7ರಲ್ಲಿ
ತಾಯಿ ಕಾವೇರಮ್ಮ, ತಂದೆ ಕೃಷ್ಣಗೌಡ.
ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ಪಡೆದಿರುವ ಅವರನ್ನು ಸೆಳೆದದ್ದು ಸಾಹಿತ್ಯ ಕ್ಷೇತ್ರ. ಕವನ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಕೋಗಿಲೆ ಕೂಗಿದಂತೆ, ಬೆಳಕಿನ ಹನಿಗಳು, ಶೆಫಾಲಿಕಾ, ಹನಿಗಳು, ಈ ಸ್ನೇಹ ಈ ಜೀವನ (ಕಾದಂಬರಿ), ಬುದ್ಧ ಮಹಾದರ್ಶನ (ಮಹಾಕಾವ್ಯ) ಮುಂತಾದವು.
ಲತಾ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಕವಿ ಪ್ರಶಸ್ತಿ, ಕೆಂಪೇಗೌಡ ರಾಷ್ಟ್ರೀಯ ಪುರಸ್ಕಾರ, ವಿಶ್ವಕರ್ಮ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.
ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲತಾ ರಾಜಶೇಖರ್ ಅವರನ್ನು ಆಯ್ಕೆ ಮಾಡಬೇಕೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.