ಬಾಗಿಲು ಮುರಿದು ಚಿನ್ನಾಭರಣ ನಗದು ಕಳ್ಳತನ 11ನೇ ವಾರ್ಡಿನ ಚಿನ್ನದೊರೆ ಮನೆಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ಕುಟುಂಬದವರಿಗೆ ಧೈರ್ಯ ತುಂಬುವ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಹನೂರು :ಪಟ್ಟಣದ 11ನೇ ವಾರ್ಡಿನ ಚಿನ್ನ ದೊರೆ ಧನಲಕ್ಷ್ಮಿ ಮನೆಯಲ್ಲಿ ಸೋಮವಾರ ತಡರಾತ್ರಿ ಖದೀಮರು ಮನೆಯ ಬಾಗಿಲು ಮುರಿದು ಮಗಳ ಮದುವೆಗೆ ಕೂಡಿಟ್ಟಿದ್ದ ಅರ್ಧ ಕೆಜಿ ಚಿನ್ನ 20 ಲಕ್ಷ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೊಲೀಸ್ ಅಧಿಕಾರಿ ಕೆ ಟಿ ಕವಿತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪೊಲೀಸ್ ತಂಡ ರಚನೆ ಮಾಡಿ ಖದೀಮ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಶಾಸಕರ ಭೇಟಿ : ಪಟ್ಟಣದ 11ನೇ ವಾರ್ಡಿನ ಶಾಸಕರ ವಾಸ್ತವ್ಯ ಮಾಡಿರುವ ಮನೆಯ ಸಮೀಪವೇ ಚಿನ್ನಾಭರಣ ನಗದು ಕಳತನವಾಗಿರುವ ಬಗ್ಗೆ ಶಾಸಕ ಎಂ.ಆರ್ ಮಂಜುನಾಥ್ ಚಿನ್ನ ದೊರೆ ಮನೆಗೆ ಬುಧವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ಅವರಿಂದ ಚಿನ್ನಾಭರಣ ನಗದು ಕಳೆದುಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಧೈರ್ಯ ತುಂಬಿದರು.
ಪೊಲೀಸರಿಗೆ ಸೂಚನೆ : ಪಟ್ಟಣದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕಳ್ಳತನವಾಗಿರುವ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಹೀಗಾಗಿ ಈ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಆಯಾ ಆಯಾಮಗಳಲ್ಲಿ ಕಳ್ಳರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಇದ್ದ ಪಿಎಸ್ಐ ಮಂಜುನಾಥ್ ಪ್ರಸಾದ್ ಅವರಿಗೆ ಸೂಚನೆ ನೀಡಿದರು ಜೊತೆಗೆ ಇಂತಹ ಪ್ರಕರಣಗಳು ಮರುಕಳಿಸದಂತೆ ಪಟ್ಟಣದಲ್ಲಿ ಹೆಚ್ಚು ಪೊಲೀಸರನ್ನು ಗಸ್ತು ಯೋಜನೆ ಮಾಡುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಆನಂದ್ ಕುಮಾರ್, ಮುಖಂಡರಾದ ವಿಜಯಕುಮಾರ್, ಮಂಜೇಶ್ ಗೌಡ,ರಾಜಣ್ಣ,ಉದ್ದನೂರು ಪ್ರಮೋದ್, ಬಂಡಳ್ಳಿ ಜಾವದ್, ಯುವ ಮುಖಂಡ ಅತಿಕ್, ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್