ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ಶ್ರೀಪೇಟೆ ಬಸವೇಶ್ವರ ವಾಲ್ಮೀಕಿ ಯುವಕರ ಸಂಘದಿಂದ ಶ್ರೀಗಣೇಶೋತ್ಸವ ಬಹು ಅದ್ಧೂರಿಯಾಗಿ ಜರುಗಿತು. ವಾಲ್ಮೀಕಿ ಸಮುದಾಯದ ಯುವಕರು ಹಾಗೂ ವೀರಶೈವ ಸಮಾಜದ ಯುವಕರೆಲ್ಲರೂ, ಸೌಹಾರ್ಧತೆಯಿಂದ ಬಹು ಅದ್ಧೂರಿ ಗಣೇಶೋತ್ಸವ ಆಚರಿಸಿ ಯುವ ಪೀಳಿಗೆಗೆ ಮಾದರಿಯಾದರು. ಪ್ರತಿಷ್ಠಾಪಿಸಿದ ದಿನದಿಂದ ಗಣೇಶ ವಿಸರ್ಜನೆ ಮುನ್ನ ದಿನದವರೆಗೂ, ನಾಲ್ಕು ದಿನಗಳ ಕಾಲ ಪ್ರತಿದಿನವೂ ಯುವಕರಿಂದ ಮಕ್ಕಳಿಂದ ಸ್ಥಳೀಯ ಕಲಾವಿದರಿಂದ ಅನೇಕ ಸಾಂಸ್ಕೃತಿಕ ಕಲೆಗಳ ಕಾರ್ಯಕ್ರಮಗಳು ಜರುಗಿದವು, ಪ್ರತಿಭಾನ್ವಿತ ಮಕ್ಕಳಿಗೆ ಸಾಂಸ್ಕೃತಿಕ ಕೆಲೆ ಅನಾವರಣಗೊಳಿಸಲು ವೇದಿಕೆ ನಿರ್ಮಿಸಿಕೊಡಲಾಗಿತ್ತು. ನಿತ್ಯವೂ ವಿವಿಧ ಬಗೆಯ ನೃತ್ಯಗಳು ಹಾಗೂ ರಂಗ ಕಲೆ ಪ್ರಸ್ತುತ ಪಡಿಸಲು ವೇದಿಕೆ ಸಹಕಾರಿಯಾಗಿತ್ತು.
ಪಟ್ಟಣದ ಶ್ರೀ ಪೇಟೆಬಸವೇಶ್ವರ ನಗರದ ರಂಗವೇದಿಕೆಯಲ್ಲಿ, ರೂಢಿ ಸಂಪ್ರದಾಯದಂತೆ ಶ್ರೀಗಣೇಶನ ಮೂರ್ತಿಯನ್ನು ತಂದು ವಿಧಿವತ್ತಾಗಿ ಪ್ರತಿಷ್ಠಾಸಿ ಐದು ದಿನಗಳ ಕಾಲ ಆರಾಧಿಸಲಾಯಿತು. ಮಕ್ಕಳಿಂದ ನೃತ್ಯ ಕಲೆ ಪ್ರದರ್ಶನ, ರಂಗ ಕಲೆ ಪ್ರದರ್ಶನ, ಏಕ ಪಾತ್ರ ಅಭಿನಯ, ಗಾಯನ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಬಗೆಯ ಸ್ಪರ್ಧೆಗಳನ್ನು ಯುವಕರ ತಂಡ ಆಯೋಜಿಸಿತ್ತು, ಸ್ಪರ್ಧೆಗಳಲ್ಲಿ ವಿಚೇತರಿಗೆ ಸೂಕ್ತ ಬಹುಮಾನ ವಿತರಿಸಲಾಯಿತು. ಶ್ರೀ ಪೇಟೆ ಬಸವೇಶ್ವರ ವಾಲ್ಮೀಕಿ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸೌಹಾರ್ದತೆಯಿಂದ ಶ್ರೀಗಣೇಶೋತ್ಸವವನ್ನು ಬಹು ಅದ್ಧೂರಿಯಾಗಿ ಆಚರಿಸಿದರು. ಗಣೇಶೋತ್ಸವ ಪ್ರಯುಕ್ತ ನಾಲ್ಕನೇ ದಿನದಂದು, ಸಾರ್ವಜನಿಕವಾಗಿ ಗಣೇಶ ದೇವರ ಪ್ರಸಾದ ಹಾಗೂ ಅನ್ನಸಂತರ್ಪಣೆ ಸೇವೆ ಜರುಗಿತು. ಶ್ರೀಪೇಟೆ ಬಸವೇಶ್ವರ ನಗರದ ಸಮಸ್ತ ದೈವಸ್ತರು ಹಾಗೂ ನೂರಾರು ಭಕ್ತರು. ಮಹಿಳೆಯರು ಮಕ್ಕಳಾದಿಯಾಗಿ, ನಾಗರೀಕರು, ಹಿರಿಯರು ಪ್ರಸಾದ ಸೇವನೆ ಮಾಡಿ ಪುನೀತರಾದರು. ಶ್ರೀ ಪೇಟೆ ಬಸವೇಶ್ವರ ನಗರದ ಸಮಸ್ತ ಜನತೆ, ಉತ್ಸವದಲ್ಲಿ ಸಕ್ರೀವಾಗಿ ಭಾಗಿಯಾಗಿ ಅದ್ಧೂರಿ ಗಣೇಶೋತ್ಸವಕ್ಕೆ ಸಾಕ್ಷಿಯಾದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.