ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಯಚೂರು,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂಧನೂರು,ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ.ಹೊಸಹಳ್ಳಿ ಸಹಯೋಗದೊಂದಿಗೆ 7ನೇ ಮೈಲ್ ಕ್ಯಾಂಪ್ ಕ್ಲಸ್ಟರ್ ಮಟ್ಟದ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿದ ತುರವಿಹಾಳ ವಲಯ ಶಿಕ್ಷಣ ಸಂಯೋಜಕರಾದ ಸಾವನ್ ಸಾಬ್ ಮಾತನಾಡಿ ಪ್ರತಿಭಾ ಕಾರಂಜಿ ಎನ್ನುವುದು ಮಕ್ಕಳ ಪ್ರತಿಭೆಯ ಅನ್ವೇಷಣೆಯ ಕಾರ್ಯಕ್ರಮ,ಮಗುವಿನ ಕಲಿಕೆಯ ಜೊತೆಗೆ ಸಾಂಸ್ಕೃತಿಕವಾಗಿ ಬೆಳೆಸುವ ಮತ್ತು ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು, ಇಂದಿನ ಮಕ್ಕಳೇ ಮುಂದಿನ ರಾಷ್ಟ್ರದ ಪ್ರಜೆಗಳು ಮಕ್ಕಳ ಪ್ರತಿಭೆಯನ್ನು ಹೊರಹಾಕುವ ಮುಖ್ಯ ವೇದಿಕೆ ಇದಾಗಿದೆ.ಕಲೆಯ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಯನ್ನು ಕ್ಲಸ್ಟರ್ ನಿಂದ ತಾಲೂಕ ಮಟ್ಟಕ್ಕೆ ಕಳುಹಿಸಲು ನಿಷ್ಪಕ್ಷಪಾತ ತೀರ್ಪು ನೀಡಿ ಎಂದು ಎಲ್ಲಾ ನಿರ್ಣಾಯಕರುಗಳಿಗೆ ವಿಶೇಷ ಮನವಿ ಮಾಡಿದರು.
ಆಲದ ಮರದ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುಂಜಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಂಬಣ್ಣ ಭೋವಿ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಈ ಪ್ರತಿಭಾ ಕಾರಂಜಿ ನಮ್ಮ ಗ್ರಾಮದ ಹೆಮ್ಮೆ.ಇದಕ್ಕೆ ತನು ಮನ ಧನ ಸಮರ್ಪಿಸಿದ ಶಿಕ್ಷಣ ಪ್ರೇಮಿಗಳು ಹಾಗೂ ಗ್ರಾಮದ ಎಲ್ಲಾ ಮುಖಂಡರಿಗೂ ಮನದಂತರಾಳದ ಕೃತಜ್ಞತೆಗಳು ಎಂದು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭರತನಾಟ್ಯ,ಛದ್ಮವೇಷ, ಆಶುಭಾಷಣ,ಚರ್ಚಾ ಸ್ಪರ್ಧೆ, ನಾಟಕ,ದೇಶಭಕ್ತಿ ಗೀತೆ,ಕವನ ವಾಚನ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು
ಎಸ್ ಡಿ ಎಂ ಸಿ ಅಧ್ಯಕ್ಷರಾದ ವೆಂಕಟೇಶ್ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರೆ ಗ್ರಾಮ ಪಂಚಾಯತನ ಸದಸ್ಯರು ಊರಿನ ಮುಖಂಡರು ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ಹಾಗೂ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಲು ಸಹಕರಿಸಿದರು.ಕೆ ಹೊಸಹಳ್ಳಿ ಶಾಲೆಯ ಮುಖ್ಯ ಗುರುಗಳಾದ ಹುಸೇನ್ ಸಾಬ್ ಪ್ರಾಸ್ಥಾವಿಕ ನುಡಿಯ ಮೂಲಕ ಸರ್ವರನ್ನು ಸ್ವಾಗತಿಸಿದರೆ ಸಹ ಶಿಕ್ಷಕ ಶರಣಪ್ಪ ತೀರ್ಥಭಾವಿ ನಿರೂಪಿಸಿದರು.ಹಿರಿಯ ಸಹ ಶಿಕ್ಷಕರಾದ ದೊಡ್ಡಪ್ಪ ಧನ್ಯವಾದ ಸಮರ್ಪಿಸಿ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.
ಈ ಸಂದರ್ಭದಲ್ಲಿ ತುರವಿಹಾಳ ವಲಯದ ಶಿಕ್ಷಣ ಸಂಯೋಜಕರಾದ ಸಾವನ್ ಸಾಬ್,ಗುಂಜಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಂಬಣ್ಣ ಭೋವಿ,SDMC ಅಧ್ಯಕ್ಷ ವೆಂಕಟೇಶ ಮಡಿವಾಳ, ಶಾಲೆಯ ಪ್ರಭಾರಿ ಮುಖ್ಯಗುರು ಹುಸೇನ್ ಸಾಬ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಊರಿನ ಹಿರಿಯರು,ಶಾಲೆಯ ಶಿಕ್ಷಕರು,ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು,ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.