ಯಾದಗಿರಿ:ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವದಂದು ಧ್ವಜರೋಹಣದ ನಂತರ ಕಲಬುರಗಿಯಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜಗುರಲಿರುವ ಸಚಿವ ಸಂಪುಟ ಸಭೆಯಲ್ಲಿ ಗುರುಮಠಕಲ್ ನೂತನ ತಾಲೂಕು ಕೇಂದ್ರಗಳಲ್ಲಿ ಇನ್ನೂ ಹಲವಾರು ತಾಲೂಕು ಕಛೇರಿಗಳನ್ನು ಆರಂಭಿಸುವ ಕುರಿತು ಜಿಲ್ಲಾ ಉಸ್ತುವಾರಿಗಳು ಹಾಗೂ ಗುರುಮಠಕಲ್ ನ ಮಾನ್ಯ ಶಾಸಕರು ಶರಣಗೌಡ ಕಂದಕೂರ ರವರು ಮಾನ್ಯ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟು ಸರಕಾರದ ಮೇಲೆ ಒತ್ತಡ ಏರುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲೂಕು ಅಧ್ಯಕ್ಷರು ಶರಣಬಸಪ್ಪ ಯಲ್ಹೇರಿ ಅಗ್ರಹಿಸಿದ್ದಾರೆ.
ತಾಲೂಕು ಕೇಂದ್ರ ಎಂದು ಘೋಷಣೆಯಾಗಿ ಸುಮಾರು ವರ್ಷಗಳು ಕಳೆದಿವೆ ಇಲ್ಲಿಯವರೆಗೆ ತಾಲೂಕಿಗೆ ಸಂಬಂಧಪಟ್ಟ ಇನ್ನೂ ಹಲವಾರು ಕಛೇರಿಗಳು ಆರಂಭಿಸದೆ ಇರುವುದು ನಮ್ಮ ಭಾಗದ ಸಾರ್ವಜನಿಕರ ದುರದೃಷ್ಟ. ತಮ್ಮ ಸಾರ್ವಜನಿಕ ಕೆಲಸ ಕಾರ್ಯಗಳಿಗಾಗಿ ಗುರುಮಠಕಲ್ ನಿಂದ ಸುಮಾರು 48 ಕಿ.ಮೀ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗುತ್ತದೆ ಮತ್ತು ಉಪ ನೋಂದಣಿ ಕಛೇರಿ, ಅಗ್ನಿಶಾಮಕ ದಳ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕಛೇರಿ, ಅರಣ್ಯ ಇಲಾಖೆ ಕಛೇರಿ, ನ್ಯಾಯಾಲಯ ಇನ್ನೂ ಹಲವಾರು ತಾಲೂಕು ಕಛೇರಿಗಳು ಆರಂಭವಾಗಿರುವುದಿಲ್ಲ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕು ಗಡಿ ಭಾಗವಾಗಿದೆ. ಇಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಆಗುವುದರಲ್ಲಿ ಕುಂಠಿತವಾಗುತ್ತಿದೆ. ನಮ್ಮ ಸಂಘಟನೆಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಲವಾರು ಭಾರಿ ಮನವಿ ಮಾಡಿರುತ್ತೇವೆ. ಆದ ಕಾರಣ ಕಲಬುರಗಿ ನಡೆಯುವ ಸಚಿವ ಸಂಪುಟದಲ್ಲಿ ಗಡಿ ಭಾಗ ಗುರುಮಠಕಲ್ ತಾಲೂಕಿನ ಬಗ್ಗೆ ಮಾನ್ಯ ಶಾಸಕರು ಅತಿ ಹೆಚ್ಚು ಗಮನ ಹರಿಸಿ ಎಲ್ಲಾ ಕಛೇರಿಗಳನ್ನು ಆದಷ್ಟು ಬೇಗನೆ ಪ್ರಾರಂಭ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕೆಂದು ಮಾಡಿಕೊಳ್ಳುತ್ತೇವೆ.
ಒಂದುವೇಳೆ ವಿಳಂಬ ನೀತಿ ಧೋರಣೆ ತೋರಿದಲ್ಲಿ ಮುಂಬರುವ ದಿನಗಳಲ್ಲಿ ಸರಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲೂಕು ಘಟಕದ ವತಿಯಿಂದ ಸಂಪೂರ್ಣ ಗುರುಮಠಕಲ್ ಬಂದ್ ಮಾಡಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಕರವೇ ಅಧ್ಯಕ್ಷ ಶರಣಬಸಪ್ಪ ಯಲ್ಹೇರಿ ಆಗ್ರಹಿಸಿದರು ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಮೇಧಾ, ವೆಂಕಟೇಶ ಚಿಟಿಕನಪಲ್ಲಿ, ಭೀಮಶಂಕರ ಪಡಿಗೆ, ರಾಕೇಶ ಕುಮಾರ ಹರಕಂಚಿ, ಶರಣು ಮಜ್ಜಿಗೆ ಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.