ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮದ ಯುವ ಮುಖಂಡರಾದ ಭಾಗಣ್ಣ ನಾಲ್ವಡಿಗಿನವರು ಯುವಕ, ಯುವತಿ, ಮಹಿಳೆಯ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮದ ಗ್ರಾಮಸ್ಥರಿಗೆ ಪ್ರತಿ ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಮೊದಲ ದಿನ ಯುವಕರಿಗೆ ಕಬ್ಬಡಿ ಸ್ಪರ್ಧೆ, ಎರಡೆ ದಿನ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮೂರನೆ ದಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ,ನಾಲ್ಕುನೇ ದಿನ ರೈತನ ಮಕ್ಕಳಿಗೆ ಕೈ ಕುಸ್ತಿ ಮತ್ತು ಕೊನೆಯ ದಿನ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತು.
ಈ ಸ್ಪರ್ಧೆಯಲ್ಲಿ ಭಾಗಿಯಾಗಿ ವಿಜೇತರಿಗೆ ನಮ್ಮ ಗೆಳಯರ ಬಳಗ 2012-13 SSLC ಬ್ಯಾಚ್ ನ ವಿರೂಪಾಕ್ಷ, ಭೀಮು, ಶೇಖರ್,ಭಾಷಾ,ಮುತ್ತು, ಮಲ್ಲು, ಸಿದ್ದು ಮತ್ತು ಇನ್ನಿತರರು ಸೇರಿ ಬಹುಮಾನಗಳನ್ನು ನೀಡಿ ಗ್ರಾಮದ ಯುವಕ, ಯುವಕರಿಗೆ ಮತ್ತು ಗ್ರಾಮಸ್ಥರಿಗೆ ಮುಂದೇನು ಕೂಡಾ ಇದೆ ರೀತಿ ಒಳ್ಳೆ ಕಾರ್ಯಕ್ರಮದ ಬಗ್ಗೆ ಚಿಂತನೆ ಮಾಡುತ್ತೆವೆಂದು ಭರವಸೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರು ಉಮಾರೆಡ್ಡಿ, ಗ್ರಾ ಪಂ ಸದಸ್ಯರು,ಮಲ್ಲು ಗೌಡ,ಪ್ರಕಾಶ್ ಮೋದಿ, ಅಂಬರೇಷ್ ನಾಲ್ವಡಿಗಿ,ಬಸ್ಸು, ಮಾಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ-ಶಿವರಾಜ ಸಾಹುಕಾರ