ವಿಜಯನಗರ ಜಿಲ್ಲೆ ಹರಪನಹಳ್ಳಿ: ಕೆ.ಕಲ್ಲಳ್ಳಿ ಗ್ರಾಮ ಸೇರಿದಂತೆ ಕಲ್ಲಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕೆಂದು ಕರ್ನಾಟಕ ರೈತ ಮಿತ್ರ ಸಂಘ ಆಗ್ರಹಿಸಿದೆ. ಸಂಘದ ರಾಜ್ಯಾಧ್ಯಕ್ಷ ಹೆಚ್.ವೆಂಕಟೇಶ ನೇತೃತ್ವದಲ್ಲಿ, ಸಂಘದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಕೆ.ಕಲ್ಲಳ್ಳಿ ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದರು. ಅಧ್ಯಕ್ಷ ಹೆಚ್.ವೆಂಕಟೇಶ ಮಾತನಾಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸರ್ಕಾರಿಗೆ ಸಂಬಳ ತಿನ್ನುತ್ತಾರಾದರೆ ನಿಷ್ಠೆಯಿಂದ ಕರ್ಥವ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದರು. ಗ್ರಾಮ ಪಂಚಾಯ್ತಿ ಸದಸ್ಯರು ಅಷ್ಟೇ ಚುನಾಯಿತರಾಗಿ ಸದಸ್ಯರಾಗುವುದಷ್ಟೇ, ಅವರಿಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕೆಂಬ ಕನಿಷ್ಠ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯೆಕ್ತಪಡಿಸಿದರು.
ಗ್ರಾಮ ಪಂಚಾಯ್ತಿ ಅಧಿಕಾರಿ ಗ್ರಾಮಸ್ಥರು ಒತ್ತಡಕ್ಕೆ ಸ್ಥಳಕ್ಕೆ ದಾವಿಸಿ, ದುಸ್ಥಿತಿ ಗಮನಿಸುತ್ತಾರಾದರೂ ಏನೂ ಪ್ರಯೋಜನವಾಗಲ್ಲ. ಕೇವಲ ನಾಮಿಕಾವಸ್ಥೆಗೆ ಭೇಟಿ ನೀಡುತ್ತಾರೆ, ಬಂದೆ ಪುಟ್ಟ ಹೋದೆ ಪುಟ್ಟ ಎಂಬಂತೆ ವರ್ತಿಸುತ್ತಾರೆ ಎಂದು ದೂರಿದರು.
ಕೆ.ಕಲ್ಲಳ್ಳಿ ಸೇರಿದಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಶುದ್ಧ ಕುಡಿಯುವ ನೀರು, ಶೌಚಾಲಯ, ಸಿ.ಸಿ ರಸ್ತೆ, ಸಾರಿಗೆ ವ್ಯವಸ್ಥೆ, ಆರೋಗ್ಯ, ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ರೀತಿಯ ಸೌಕರ್ಯಗಳು ಮರೀಚಿಕೆಯಾಗಿವೆ. ಒಟ್ಟಾರೆ ಕೆ.ಕಲ್ಲಳ್ಳಿ ಗ್ರಾಮ ಪಂಚಾಯ್ತಿ ಸಮಸ್ಯೆಗಳ ತಾಣವಾಗಿದ್ದು, ಶೀಘ್ರವೇ ಸಮಸ್ಯೆಗಳಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿದರು.
ಕೆ ಕಲ್ಲಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಪಾಪುರ, ಅರೇಮಜ್ಜಿಗೇರಿ, ಕಲ್ಲುಮಜ್ಜೀಗೇರಿ ತಾಂಡ, ಇಟ್ಟಿಗುಡಿ, ಬೇವಿನಹಳ್ಳಿ, ವ್ಯಾಸನ ತಾಂಡ, ಕೆ.ಕಲ್ಲಳ್ಳಿ ಗ್ರಾಮಗಳಲ್ಲಿ. ನೈರ್ಮಲ್ಯತೆ ಕಾಣದಾಗಿದೆ ಮೂಲಭೂತ ಸೌಕರ್ಯಗಳು ಗಗನ ಕುಸುಮವಾಗಿವೆ. ಸಂಬಂಧಿಸಿದಂತೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಪ್ರಯೋಜನವಾಗಿಲ್ಲ, ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳಾಗಲಿ ಹಾಗೂ ಅಧಿಕಾರಿಗಳಾಗಲಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡದೆ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಹಂಪಾಪುರ ಗ್ರಾಮದಲ್ಲಿ ಕುಡಿಯುವ ನೀರು, ಬಸ್ ನಿಲ್ದಾಣ, ಶಾಲೆಗೆ ಕಾಂಪೌಂಡ್ ನಿರ್ಮಾಣ. ಅರೇಮಜ್ಜಿಗೆರಿಗೆ ಬಸ್ ಸಂಪರ್ಕ ಸೌಕರ್ಯಇಲ್ಲದಿರುವುದು, ಸೇರಿದಂತೆ ಕೆಲ ಗ್ರಾಮಗಳಲ್ಲಿ. ಅನೇಕ ಜ್ವಲಂತ ಸಮಸ್ಯೆಗಳು ವರ್ಷಗಳಿಂದ ಇದ್ದು, ಅರಿತೂ ಅರಿಯದವರಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆಂದು ವೆಂಕಟೇಶ ದೂರಿದರು.
ಕಲ್ಲಳ್ಳಿ ಗ್ರಾಮ ಸೇರಿದಂತೆ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರ ಪರವಾಗಿ. ತಾವು ಮಾಡುವ ಪ್ರಮುಖ ಹಕ್ಕೊತ್ತಾಯಗಳಾದ, ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಜರುಗಿಸಬೇಕು
ನೈರ್ಮಲ್ಯತೆ ಸೂಕ್ತ ಕಾಮಗಾರಿಗಳನ್ನು ನಡೆಸಬೇಕು
ಕಸ ವಿಲೇವಾರಿ ಹಾಗೂ ಚರಂಡಿಗಳನ್ನು ಸ್ವಚ್ಚಗೊಳಿಸಬೇಕು ಕುಡಿಯುವ ನೀರಿನ ಸೌಲಭ್ಯವನ್ನು ಶೀಘ್ರವೇ ಈಡೇರಿಸಬೇಕು
ವಿದ್ಯುತ್ ದೀಪಗಳನ್ನು ಸುಸಜ್ಜಿತವಾಗಿ ಈ ಕೂಡಲೇ ಸರಿಪಡಿಸಬೇಕು.
ಜೆ ಜೆ ಎಂ ನಾಳಕ್ಕೆ ತುರ್ತಾಗಿ ಹೊಳೆ ನೀರು ಬಿಡಬೇಕು
ರಾಷ್ಟ್ರೀಯ ಸೇವೆಗಳ ಯೋಜನೆಯಡಿಯಲ್ಲಿ ಫಲಾನುಭವಿಗಳ ಆಯ್ಕೆ ನ್ಯಾಯ ಯುತವಾಗಿರಬೇಕು ಎಂದು ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ಕರ್ನಾಟಕ ರೈತ ಮಿತ್ರ ಸಂಘದ ಪದಾಧಿಕಾರಿಗಳಾದ
ತಾಲೂಕಾಧ್ಯಕ್ಷ ಲಕ್ಷ್ಮಣ್, ಬಿ.ಎಂ.ನಾಗರಾಜ್, ರಮೇಶ್, ಎಂ.ಮಂಜುನಾಥ್, ಗೌಟಿ ಪ್ರಕಾಶ್, ನಾಗಪ್ಪ ಬಣಕಾರ್, ಭೋವಿ ನಾಗರಾಜ್, ಬಣಕಾರ್ ಕಾಂತೇಶ್, ಬಿ ನಾಗಪ್ಪ, ಹೊಲೆಕರ್ ಬಸವರಾಜ್, ಲಿಂಗಪ್ಪ ಸೇರಿದಂತೆ ಕೆಲ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.