ಶಿವಮೊಗ್ಗ :ದಾವಣಗೆರೆ ವಿವಿಯಿಂದ ನಾಲ್ಕು ವಿಜ್ಞಾನಿಗಳು ಸೇರ್ಪಡೆ.
ಶಿವಮೊಗ್ಗ: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೇರಿಕಾದ ಪ್ರತಿಷ್ಠಿತ ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯವು ಹೊರತಂದಿರುವ ವಿಶ್ವದ ಟಾಪ್ ಶೇ.೨ರಷ್ಟು ವಿಜ್ಞಾನಿಗಳ ಪಟ್ಟಿಗೆ ನಗರದ ಡಾ..ಆರ್.ಎಸ್.ವರುಣ್ಕುಮಾರ್ ಅವರು ಮತ್ತೊಮ್ಮೆ ಸೇರ್ಪಡೆ ಆಗಿದ್ದಾರೆ. ಸತತ ಎರಡನೇ ಬಾರಿಗೂ ಅವರು ಸೇರ್ಪಡೆ ಆಗುವ ಮೂಲಕ ದಾಖಲೆ ಬರೆದಿದ್ದಾರೆ.
ಡಾ.ಆರ್.ಎಸ್.ವರುಣ್ಕುಮಾರ್ ಹಿರಿಯ ಪತ್ರಕರ್ತ ಟೆಲೆಕ್ಸ್ ರವಿಕುಮಾರ್, ಶ್ರೀಮತಿ ಶಶಿಕಲಾ ಅವರ ಪುತ್ರರಾಗಿದ್ದು.ಸದ್ಯ ಮಲೇಷಿಯಾದ ಸನ್ ವೇ ಯೂನಿವರ್ಸಿಟಿಯಲ್ಲಿ ಗಣಿತಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ವರುಣ್ಕುಮಾರ್ ಅವರ ಸಂಶೋಧನಾ ಮಾರ್ಗದರ್ಶಕರಾದ ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಸಿ.ಪ್ರಸನ್ನಕುಮಾರ್ (ಕ್ಯಾಲೆಂಡರ್ ವರ್ಷ ೨೦೨೩ ೧೦೮೬೬) ಅವರೂ ಕೂಡಾ ಜಾಗತಿಕ ೨% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇವರ ಜತೆಗೆ ಅವರ ಮಾರ್ಗದರ್ಶನದಲ್ಲಿನ ನಾಲ್ಕು ಸಂಶೋಧನಾರ್ಥಿಗಳಾದ ಡಾ.ಆರ್.ಜೆ.ಪುನೀತ್ ಗೌಡ (೩೬೧೯೨), ಡಾ.ಆರ್.ನವೀನ್ ಕುಮಾರ್ (೫೨೪೭೮), ಡಾ. ಜೆ.ಕೆ.ಮಧುಕೇಶ್ (೧೫೧೬೧೫) ಮತ್ತು ಡಾ.ಆರ್.ಎಸ್.ವರುಣ್ ಕುಮಾರ್ (೧೯೭೦೪೮) ಇವರುಗಳು ಕೂಡಾ ಸೇರ್ಪಡೆಯಾಗಿದ್ದಾರೆ.
ಸ್ಟಾನ್ಫೋರ್ಡ್ ವಿವಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಮಾನದಂಡಗಳ ಪ್ರಕಾರ ವಿಜ್ಞಾನಿಗಳನ್ನು ೨೨ ವೈಜ್ಞಾನಿಕ ಕ್ಷೇತ್ರಗಳು ಮತ್ತು ೧೭೪ ಉಪ-ಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ. ಇದರಲ್ಲಿ ದಾವಣಗೆರೆ ವಿವಿಯ ಗಣಿತಶಾಸ್ತ್ರ ವಿಭಾಗದ ಪ್ರೊ. ಬಿ.ಸಿ.ಪ್ರಸನ್ನಕುಮಾರ್ ರವರು ಸತತ ನಾಲ್ಕನೇ ಬಾರಿಗೆ ಸ್ಥಾನ ಪಡೆದಿದ್ದು, ಇದರ ಜತೆಗೆ ವೃತ್ತಿ ಜೀವನದ ಸಾಧನೆಯಲ್ಲಿ ಶ್ರೇಯಾಂಕವನ್ನು ಪಡೆದಿರುವುದು ಗಮನಾರ್ಹವಾಗಿದೆ.
ಪ್ರೊ.ಬಿ.ಸಿ.ಪ್ರಸನ್ನಕುಮಾರ್ ಮಾತ್ರವಲ್ಲದೆ ಅವರ ಮಾರ್ಗದರ್ಶದಲ್ಲಿ ಸಂಶೋಧನೆಯನ್ನು ನಡೆಸುತ್ತಿರುವ ಡಾ. ಆರ್.ಜೆ. ಪುನೀತ್ ಗೌಡ, ಡಾ. ಆರ್. ನವೀನ್ ಕುಮಾರ್, ಡಾ. ಜೆ.ಕೆ. ಮಧುಕೇಶ್ ಮತ್ತು ಡಾ. ಆರ್.ಎಸ್. ವರುಣ್ ಕುಮಾರ್ ಇವರುಗಳು ಗಣಿತಶಾಸ್ತ್ರದ ಶಾಖೆ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ ವಿಷಯಗಳ ಸಂಶೋಧನೆಯಲ್ಲಿ ತೊಡಗಿದ್ದು, ಮಾರ್ಗದರ್ಶರೊಡನೆಯೇ ವಿಜ್ಞಾನಿಗಳ ಪಟ್ಟಿಗೆ ಸೇರಿರುವುದು ಸ್ಫೂರ್ತಿದಾಯಕವಾಗಿದೆ.
ಅಮೇರಿಕಾದ ಪ್ರತಿಷ್ಠಿತ ಸ್ಟಾನ್ ಫೋರ್ಡ್ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿರುವ ೧೪ ವಿಜ್ಞಾನಿಗಳು ಪ್ರಸುತ್ತ ರಾಜ್ಯದ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾವಣಗೆರೆಯ ಬಾಪೂಜಿ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಡಾ. ಆರ್.ಜೆ.ಪುನೀತ್ ಗೌಡ, ಬೆಂಗಳೂರಿನ ಅಮೃತ ವಿಶ್ವವಿದ್ಯಾಪೀಠಂನ ಗಣಿತಶಾಸ್ತ್ರ ವಿಭಾಗದಲ್ಲಿ ಡಾ. ಆರ್. ನವೀನ್ ಕುಮಾರ್, ಜಿ.ಎಂ.ವಿಶ್ವವಿದ್ಯಾಲಯದಲ್ಲಿ ಡಾ. ಜೆ.ಕೆ. ಮಧುಕೇಶ್ ಹಾಗೂ ಮಲೇಷಿಯಾದ ಸನ್-ವೇ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಡಾ. ಆರ್.ಎಸ್. ವರುಣ್ ಕುಮಾರ್ ಇವರುಗಳು ಸಹಾಯಕ ಪ್ರಾಧ್ಯಾಪಕರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆಯೂ ಕೂಡ ೨೦೨೦, ೨೦೨೧ ಮತ್ತು ೨೦೨೨ ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಡಾ.ಆರ್.ಜೆ. ಪುನೀತ್ ಗೌಡ ಹಾಗೂ ಡಾ. ಆರ್.ನವೀನ್ ಕುಮಾರ್ ರವರುಗಳು ಸ್ಥಾನ ಪಡೆದಿದ್ದರು ಹಾಗೂ ೨೦೨೧ ಮತ್ತು ೨೦೨೨ ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಡಾ. ಜೆ.ಕೆ. ಮಧುಕೇಶ್ ಮತ್ತು ಡಾ. ಆರ್.ಎಸ್. ವರುಣ್ ಕುಮಾರ್ ಸ್ಥಾನ ಪಡೆದಿದ್ದರು.
ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಡಾ.ಬಿ.ಸಿ.ಪ್ರಸನ್ನ ಕುಮಾರ್, ಡಾ.ಆರ್.ಜೆ.ಪುನೀತ್ ಗೌಡ, ಡಾ. ಆರ್. ನವೀನ್ ಕುಮಾರ್, ಡಾ.ಜೆ.ಕೆ.ಮಧುಕೇಶ್ ಮತ್ತು ಡಾ.ಆರ್.ಎಸ್. ವರುಣ್ ಕುಮಾರ್ ಇವರುಗಳಿಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಬಿ.ಡಿ. ಕುಂಬಾರ, ದಾವಣಗೆರೆ ಬಿಐಇಟಿ ನಿರ್ದೇಶಕರಾದ ಪ್ರೊ.ವೈ.ವೃಷಭೇಂದ್ರಪ್ಪ ಮತ್ತು ಪ್ರಾಂಶುಪಾಲರಾದ ಡಾ.ಎಚ್.ಬಿ. ಅರವಿಂದ ಹಾಗೂ ಅಮೃತ ವಿಶ್ವವಿದ್ಯಾಪೀಠಂನ ಕುಲಪತಿಗಳಾದ ಶ್ರೀ ಮಾತಾ ಅಮೃತಾನಂದಮಯಿ ದೇವಿ ಮತ್ತು ಆಡಳಿತ ವರ್ಗ ಅಭಿನಂದಿಸಿದ್ದಾರೆ.
ವರದಿ :ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ