ಪುರಸಭೆ ಚಿತ್ತಾಪೂರ :ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿಯಲ್ಲಿ ಸ್ವಸಹಾಯ ಗುಂಪು ಮಹಿಳೆಯರ ಮೂಲಕ ತ್ಯಾಜ್ಯದ ವಿಂಗಡಣೆ, ಮನೆಯಲ್ಲಿಯೇ ಗೊಬ್ಬರ ತಯಾರಿಕೆ ,ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಬಗ್ಗೆ ಸವಿಸ್ತಾರವಾಗಿ ಸಂವಾದ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಸಾಲುಮರದ ತಿಮ್ಮಕ್ಕ ಅನಕ್ಷರಸ್ಥ ಇದ್ದರು ಕೂಡಾ ಗಿಡಗಳನ್ನು ಬೆಳಸುವ ಮೂಲಕ ಪರಿಸರ ಕಾಳಜಿ ಹಾಗೂ ಪರಿಸರ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಇಡಿ ದೇಶಕ್ಕೆ ಮಾದರಿಯಾಗಿದ್ದಾರೆ, ಹಾಗಾಗಿ ಮಹಿಳೆಯರು ತಾವುಗಳು ಮುಂದೆ ಬಂದು ಪರಿಸರ ಉಳಿವಿಗಾಗಿ ಇಂದಿನಿಂದಲೇ ತಮ್ಮ ತಮ್ಮ ಮನೆಯಲ್ಲಿರುವ ತ್ಯಾಜ್ಯವನ್ನು ಬೇರ್ಪಡಿಸಿ ನೀಡಿ , ಮನೆಯಲ್ಲಿಯೇ ಗೊಬ್ಬರ ತಯಾರಿಕೆ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಬಟ್ಟೆ ಚೀಲ ಬಳಕೆ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಸಮುದಾಯ ಸಂಘಟನಾಧಿಕಾರಿ ವಿಠ್ಠಲ್ ಹಾದಿಮನಿ, ಆರೋಗ್ಯ ನಿರೀಕ್ಷಕರಾದ ಲೋಹಿತ್ ಕಟ್ಟಿಮನಿ, ವೆಂಕಟೇಶ ಕುಮಾರ, ನವೀನ ಕುಮಾರ ಬೋಸಗಿ ,ಭೀಮರಾಯ, ಅಂಬರೀಷ ಸೇರಿದಂತೆ ಸ್ವಸಹಾಯ ಗುಂಪಿನ ಸದಸ್ಯರು, ಇತರರು ಇದ್ದರು
ವರದಿ ಮೊಹಮ್ಮದ್ ಅಲಿ,ಚಿತ್ತಾಪುರ