ಕೊಟ್ಟೂರು:ದಿನಾಂಕ: 23/09/2024 ರಂದು ಕೂಡ್ಲಿಗಿ ತಾಲೂಕಿನಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಖೋ ಖೋ ಕ್ರೀಡಾಕೂಟ ನಡೆಸಲಾಗಿತ್ತು.
ಈ ಕ್ರೀಡಾಕೂಟದಲ್ಲಿ ಕೊಟ್ಟೂರು ತಾಲೂಕಿನ ಗಾಣಗಟ್ಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.ಈ ಸಂದರ್ಭದಲ್ಲಿ ಗಾಣಗಟ್ಟಿ ಗ್ರಾಮದ ಯುವ ಮುಖಂಡರಾದ ಎಚ್. ಬಿ. ಮಹಾಂತೇಶ್ ರವರು ಮಾತನಾಡಿ ನಮ್ಮ ಗ್ರಾಮದ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟದ ಖೋ ಖೋ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದರಿಂದ ನಮ್ಮ ಗ್ರಾಮಕ್ಕೆ ಒಳ್ಳೆ ಹೆಸರು ತಂದು ಮತ್ತು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ಗ್ರಾಮಸ್ಥರಲ್ಲಿ ಸಂತೋಷದ ವಿಷಯ ತಂದಿದ್ದಾರೆ ಈ ಶಾಲೆಯ ವಿದ್ಯಾರ್ಥಿನಿಯರು ಮುಂದಿನ ದಿನಗಳಲ್ಲಿ ನೆಡೆಯುವ ಜಿಲ್ಲಾಮಟ್ಟದ ಖೋ ಖೋ ಕ್ರೀಡಾ ಕೂಟದಲ್ಲಿ ಜಯಶೀಲರಾಗಿ ರಾಜ್ಯಮಟ್ಟದ ಖೋ ಖೋ ಕ್ರೀಡಾ ಕೂಟಕ್ಕೆ ನೀವು ಹೋಗಬೇಕೆಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿಗಳಾದ ಎಂ.ಶಶಿಧರ್, ದೈಹಿಕ ಶಿಕ್ಷಣ ಶಿಕ್ಷಕರಾದ ಚನ್ನಬಸಪ್ಪ ,ಕೊಟ್ರಯ್ಯ,ಬಸವೇಶ,ವೇದಮೂರ್ತಿ,
ಎಂ.ಪಾರ್ವತಮ್ಮ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.