ಮುಂಡಗೋಡ: ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ವತಿಯಿಂದ ಅಕ್ಟೊಬರ್ 16 ರಂದು ನಡೆಯುತ್ತಿರುವ ಮುಂಡಗೋಡ ತಾಲೂಕಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಲು ಇಚ್ಛೆಸಿದ್ದು. ಅದರಂತೆ ದಿ : 13.09.2024 ರಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಎಲ್ಲರೂ ಒಪ್ಪಿ ಸಮ್ಮೇಳನದ ಅಧ್ಯಕ್ಷರಾಗಿ ಶ್ರೀ. ಎಸ್. ಪಕ್ಕೀರಪ್ಪ, ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕರು. ಇವರನ್ನು ಮಾಡಿ ಅದರ ಪ್ರಯುಕ್ತ ದಿ :23.09.2024 ರಂದು ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ. ಎಸ್. ಪಕ್ಕೀರಪ್ಪರವರ ಕೆ. ಎಚ್. ಬಿ. ಕಾಲೋನಿಯಲ್ಲಿರುವ ಅವರ ಮನೆಗೆ ನಮ್ಮ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿ ಹೋಗಿ ಮುಂದೆ ನಡೆಯುವ ಮುಂಡಗೋಡ ತಾಲೂಕಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಕೊಡಲು ವಿನಂತಿ ಮಾಡಿ ಅಧಿಕೃತ ಅಹ್ವಾನ ಪತ್ರಿಕೆ ನೀಡಿ ಶುಭಾಶಯಗಳನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ವಸಂತ. ಕೊಣಸಾಲಿರವರು ಮಾತನಾಡುತ್ತಾ ಮುಂಡಗೋಡ ತಾಲೂಕಿನಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ತೆರೆದು ಆರ್ಥಿಕ ಸಮಸ್ಯೆ ಇದ್ದರೂ ಎಸ್. ಪಕ್ಕೀರಪ್ಪನವರು ಇಲ್ಲಿವರೆಗೂ ಕನ್ನಡ ಶಾಲೆಯನ್ನು ಅಚ್ಚುಕಟ್ಟಾಗಿ ಮಾಡಿಸುತ್ತಾ ಮುಂಡಗೋಡ ಹಾಗೂ ಜಿಲ್ಲೆಯ ಸಾವಿರಾರು ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಬಾಲಕಿಯರ ಶಿಕ್ಷಣಕಾಗಿ ಆದಿ ಜಾಂಬವ ವಸತಿ ನಿಲಯವನ್ನು ತೆರೆದು ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇನ್ನು ಹಲವಾರು ಸೇವೆಯನ್ನು ವಿವಿಧ ಕ್ಷೇತ್ರಗಳಲ್ಲಿ ಪರಿಗಣಿಸಿ ನಮ್ಮ ಪರಿಷತ್ತು ಶ್ರೀ. ಎಸ್. ಪಕ್ಕೀರಪ್ಪರವರನ್ನು ಮುಂಡಗೋಡ ತಾಲೂಕಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿಆಯ್ಕೆ ಮಾಡಲಾಗಿದೆ. ಹಾಗಾಗಿ ತಾವುಗಳು ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚನ್ನಾಗಿ ನಡೆಸಿಕೊಡಬೇಕೆಂದು ಈ ಮೂಲಕ ವಿನಂತಿಸುತ್ತೇನೆ ಎಂದರು.
ಶ್ರೀ. ಎಸ್. ಕೆ. ಬೋರಕರವರು ಮಾತನಾಡುತ್ತಾ ಬೇರೆ ಜಿಲ್ಲೆಯಿಂದ ಬಂದು ಮುಂಡಗೋಡದಲ್ಲಿ ನೆಲೆಸಿ ಕನ್ನಡ ಭಾಷೆಯಲ್ಲಿ ಕಲಿತು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸಹಾಯ ಮಾಡಿ ವಿವಿಧ ಜನಾಂಗಗಳ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಪರಿಹಾರ ನೀಡುತ್ತಾ ತಮ್ಮ ಸಮಾಜ ಸೇವೆಯನ್ನು ಪರಿಗಣಿಸಿ ನಮ್ಮ ಪರಿಷತ್ತು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೇವೆ. ಹಾಗಾಗಿ ತಾವುಗಳು ಮುಂದೆ ನಡೆಯುವ ಸಮ್ಮೇಳನವನ್ನು ನಡೆಸಿ ನಮ್ಮ ಪರಿಷತ್ತಿನ ಗೌರವವನ್ನು ಹೆಚ್ಚಿಸಬೇಕೆಂದು ಹೇಳುತ್ತೇನೆ ಎಂದರು.
ಶ್ರೀ. ಸುಭಾಸ. ವಡ್ಡರ ರವರು ಮಾತನಾಡುತ್ತಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನಾಗಿ ಶ್ರೀ. ಎಸ್. ಪಕ್ಕೀರಪ್ಪರವರನ್ನು ಆಯ್ಕೆ ಮಾಡಿದ್ದು ಸೂಕ್ತ ಮತ್ತು ನಿಜವಾದ ವ್ಯಕ್ತಿಗೆ ಈ ಗೌರವ ಸಿಕ್ಕಿದೆ. ಹಾಗಾಗಿ ನಾವೆಲ್ಲರೂ ಸೇರಿ ಮುಂಡಗೋಡ ತಾಲೂಕಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧುರಿಯಾಗಿ ಮಾಡೋಣ ಕನ್ನಡದ ಭಾಷೆಯ ಪ್ರೀತಿಯನ್ನು ತಾಲೂಕಿನ ಪ್ರತಿಯೊಬ್ಬರಿಗೂ ಹಂಚೋಣ ಎಂದರು.
ಶ್ರೀ.ಎಸ್. ಬಿ. ಹೂಗಾರ ಮಾತನಾಡುತ್ತಾ ಅಕ್ಟೊಬರ್ ತಿಂಗಳು 16 ನೇ ತಾರೀಕಿಗೆ ನಡೆಯುವ ಮುಂಡಗೋಡ ತಾಲೂಕಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರನಾಗಿ ಸಮಾಜ ಸೇವಕರು ಹಾಗೂ ಚಿಂತಕರು ಮತ್ತು ಉತ್ತಮ ಆಡಳಿತ ನಡೆಸುತ್ತಾ ಆದಿ ಜಾಂಬಾವ ಪ್ರೌಢಶಾಲೆ ಹಾಗೂ ವಸತಿ ನಿಲಯ ಮತ್ತು ಬ್ಯಾಂಕ್ ಗಳನ್ನು ಸ್ಥಾಪಿಸಿ ಆರ್ಥಿಕ ದುರ್ಬಲ ವರ್ಗದವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬ್ಯಾಂಕಗಳನ್ನು ತೆರೆದು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಶ್ರಮಜೀವಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಬಹಳ ಸೂಕ್ತ ಮತ್ತು ಪ್ರಸ್ತುತ ಹಾಗಾಗಿ ಅವರಿಗೆ ವ್ಯಯಕ್ತಿಕವಾಗಿ ಶುಭಾಶಯಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಶ್ರೀ. ಸಂಗಪ್ಪ. ಕೋಳೂರು, ಶ್ರೀ. ಮತಿ ಶಾರದಾ. ರಾಠೋಡ, ಎಸ್. ಕೆ. ಬೋರಕರ,ಮಾಜಿ ಸಮ್ಮೇಳನ ಸರ್ವಾಧ್ಯಕ್ಷರು ಹಾಗೂ ಪತ್ರಕರ್ತರಾದ ಶ್ರೀ. ರಾಜಶೇಖರ. ನಾಯ್ಕ, ಶಿವಾನಂದ. ವಾಲಿಶೆಟ್ಟರ, ಶ್ರೀ. ನಾಗರಾಜ. ಅರ್ಕಸಾಲಿ, ಮಲ್ಲಮ್ಮ. ನೀರಲಗಿ, ಆನಂದ. ಹೊಸೂರು,ಕು. ಸ್ನೇಹಾ. ಹೊಸಮನಿ, ಸಾನಿಯಾ. ಹೊಸಮನಿ ಹಾಗೂ ಪಕ್ಕೀರಪ್ಪರವರ ಧರ್ಮ ಪತ್ನಿ ಶ್ರೀ. ಗಂಗಾ. ಹೊಸಮನಿ, ಶೀಲಾ. ರಾಠೋಡ ಮುಂತಾದವರು ಹಾಜರಿದ್ದರು. ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ. ಶೇಟ್ ಸ್ವಾಗತಿಸಿ,ಶ್ರೀ. ಎಸ್ ಡಿ. ಮುಡೆಣ್ಣವರ ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.