ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದೇವನಾಯಕಸಹಳ್ಳಿ,ಟಿ,ಬಿ, ವೃತ್ತದಲ್ಲಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇವರಿಂದ ದಿನಾಂಕ 25/09/2024 ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ 11 ಘಂಟೆಗೆ
2023/2024/ ರ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಎ ಜಿ ಪ್ರಕಾಶ್, ಉಪಾಧ್ಯಕ್ಷರಾದ ,ವಿನೋದಮ್ಮ, ಮತ್ತು ಸರ್ವ ಸದಸ್ಯರು ಇದ್ದರು.
ದಿನಾಂಕ 01/04/2023ರಿಂದ 31/03/2024ರವರಗಿನ ಜಮಾ ಖರ್ಚನ್ನು
ಮುಖ್ಯ ಕಾರ್ಯನಿರ್ವಾಹಕ ಜಿ ಎಂ ಚೇತನ್ ಸರ್ವ ಸದಸ್ಯರಿಗೂ ಓದುವ ಮೂಲಕ ತಿಳಿಸಿದರು
2024/2025/ನೇ ಸಾಲಿನ ಡಿ ಸಿ ಸಿ ಬ್ಯಾಂಕ ದಾವಣಗೆರೆಯಿಂದ ತರಬಹುದಾದ ಕೆ ಸಿ ಸಿ ಬೆಳೆಸಾಲ 8, ಕೋಟಿ ಎಮ್ ಟಿ ಎಲ್ ಮತ್ತು ತೋಟಗಾರಿಕೆ ಸಾಲ 1, ಕೋಟಿ ,ಹೈನುಗಾರಿಕೆ 50 ಲಕ್ಷ ,ಪಂಪ್ ಸೆಟ್ ಸಾಲ50,ಲಕ್ಷ ವಸೂಲಾತಿ ಆಗದೆ ಇರುವ ಕೆಲವು ಸಾಲ ಗಳಿಗೆ ಲೀಗಲ್ ನೋಟಿಸ್ ಜಾರಿ ಮಾಡುವ ಮುಖಾಂತರ ಮತ್ತು ಸಂಘಕ್ಕೆ ಮೂಲ ಸಂಘದಿಂದ ಬರಬೇಕಾದ ಹಣವನ್ನು ಪಡೆಯುವ ನಿರ್ಧಾರವನ್ನು ಹಾಗೆ ಸಂಘವನ್ನು ಉನ್ನತ ಅರ್ಥಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸರ್ವ ಸದಸ್ಯರು ನಮ್ಮೊಂದಿಗೆ ಸಹಕರಿಸಬೇಕು ಎಂದು ಹಿಂದಿನ ಸಾಲುಗಳ ನಿವ್ವಳ ನಷ್ಟ 10,08,375, ಇದ್ದು ಅದರಲ್ಲಿ ಇಂದು 2023,24, ಸಾಲಿನ ನಿವ್ವಳ ನಷ್ಟ,5,35,757,ಇದೆ ಎಂದು ಎ ಜಿ ಪ್ರಕಾಶ್ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಸರ್ವ ಸದಸ್ಯರು ಮತ್ತು ನಿರ್ದೇಶಕ, ಮಾರುತಿ, ಸುಶೀಲಮ್ಮ, ಮಲ್ಲೇಶ್, ರಮೇಶ,ಪರಮೇಶ, ಗುರುಬಸಪ್ಪ, ಮತ್ತು ಸಂಘದ ಸಿಬ್ಬಂದಿ ವರ್ಗ, ಮನೋಜ್, ಪ್ರವೀಣ್, ನವೀನ, ಕಾರ್ತಿಕ್ ಇದ್ದರು.
ವರದಿ ಪ್ರಭಾಕರ್ ಡಿ ಎಂ