ಚಿಕ್ಕಮಗಳೂರು:ನಗು ಫೌಂಡೇಶನ್ ಮತ್ತು ಡಚ್ ವಿವ್ಯೂ ಕಂಪನಿಯ ಸಹಯೋಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಆರು ಶಾಲೆಗಳ ನೂರೈವತ್ತು ಮಕ್ಕಳಿಗೆ ಆರು ವಾರಗಳ ಕಾಲ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ನೀಡಲಾಯಿತು. ಈ ಯೋಜನೆಯ ಅನುಷ್ಠಾನಕ್ಕಾಗಿ ಫೌಂಡೇಶನ್ ರವರು ಇಲ್ಲಿಯವರೆಗೆ 18,000 ರೂಪಾಯಿ ಖರ್ಚು ಮಾಡಿದ್ದಾರೆ.
ವಾರಕ್ಕೆ ನಾಲ್ಕು ದಿನಗಳಂತೆ ಪ್ರತಿ ದಿನವೂ ಕೂಡ ವಿಶೇಷ ಪೌಷ್ಟಿಕ ಆಹಾರವಾದ ತೆಂಗಿನ ಕಾಯಿ ಲಾಡು, ಶೇಂಗಾ ಲಾಡು, ಸಿರಿ ಧಾನ್ಯಗಳ ಲಾಡು, ಗೋಡಂಬಿ ಬಿಸ್ಕೆಟ್ , ಹೆಸರು ಕಾಳು,ಕಡ್ಲೆ ಕಾಳು,ಹಸಿರು ಬಟಾಣಿ ಕಾಳು ಮತ್ತು ಬಾಳೆಹಣ್ಣು ನೀಡಿದ್ದಾರೆ .ಇದರ ಲಾಭವನ್ನು ಹೇರೂರು ಶಾಲೆಯ 50 ಮಕ್ಕಳು, ಹೆದ್ಸೆ ಶಾಲೆಯ 29 ಮಕ್ಕಳು, ಎಲೆಮಡಲು ಶಾಲೆಯ 21 ಮಕ್ಕಳು,ಮೇದಕ್ಕಿ ಶಾಲೆಯ 8 ಮಕ್ಕಳು, ತಲಮಕ್ಕಿ ಶಾಲೆಯ 21ಮಕ್ಕಳು (ನರ್ಸರಿ ) ಮತ್ತು ಸುಂಕದಗದ್ದೆ ಶಾಲೆಯ 21 ಮಕ್ಕಳು ಪಡೆದಿದ್ದಾರೆ ಎಂದು ಶಿಕ್ಷಕರಾದ ಚೌಡ್ಲಾಪುರ ಸೂರಿಯವರು ತಿಳಿಸಿದ್ದಾರೆ.
ಬಡ ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸಲು ಶ್ರಮಿಸಿದ ನಗು ಫೌಂಡೇಶನ್ ಪ್ರವರ್ತಕರಾದ ಶ್ರೀಮತಿ ದೀಪ್ತಿ ಮೇಡಂರವರಿಗೆ ಹಾಗೂ ಡಚ್ ವಿವ್ಯೂ ಕಂಪನಿಗೆ ಎಲ್ಲಾ ಶಾಲೆಗಳ ಪರವಾಗಿ ಮುಖ್ಯಗುರುಗಳು ಅಭಿನಂದನೆಗಳನ್ನು ಸಲ್ಲಿಸಿದರು. ತಲಮಕ್ಕಿ ಶಾಲೆಯ ಶಿಕ್ಷಕರಾದ ರಂಗನಾಥ್ ರವರು ಮಾತನಾಡಿ ಫೌಂಡೇಶನ್ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು ಬಡ ಮಕ್ಕಳ ಅವರ ಕಾಳಜಿಗೆ ನಾವು ಎಷ್ಟೇ ಧನ್ಯವಾದಗಳನ್ನು ಹೇಳಿದರು ಸಾಲದು, ಮತ್ತಷ್ಟು ಸಮಾಜಮುಖಿ ಕಾರ್ಯ ಅವರಿಂದ ಸಾಗಲಿ ಎಂದು ಶುಭಹಾರೈಸುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ಮುಖ್ಯಗುರುಗಳಾದ ಸುರೇಂದ್ರ, ನವೀನ್, ಅಶ್ವಿನಿ, ರಾಜೇಶ್ ಮತ್ತು ಮಮತರವರು ಫೌಂಡೇಶನ್ ಗೆ ಅಭಿನಂದನೆಗಳನ್ನು ಕೋರಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.