ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ “ರಾಷ್ಟ್ರಪಿತ ಮಹಾತ್ಮ ಗಾಂಧೀಜಿ” ಹಾಗೂ ಮಾಜಿ ಪ್ರಧಾನಿ “ಲಾಲ್ ಬಹದ್ದೂರ್ ಶಾಸ್ತ್ರೀಜಿ”ಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಭಕ್ತಿಯ ನಮನ ಸಲ್ಲಿಸುತ್ತಾ, ಶಾಂತಿದೂತನಾಗಿ ಶಾಂತಿ ಮತ್ತು ಅಹಿಂಸೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಪ್ರಮುಖ ಪಾತ್ರವಹಿಸಿ ಇಡೀ ಜಗತ್ತಿಗೆ ಮಹಾತ್ಮರಾಗಿ ಗಾಂಧೀಜಿಯವರು ಕಂಗೊಳಿಸಿದ್ದಾರೆ ಹಾಗೂ ಸರಳತೆ ಹಾಗೂ ಸಜ್ಜನಿಕೆಯ ಮೂಲಕ ಪ್ರಸಿದ್ದರಾಗಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಘೋಷಿಸಿದ “ಜೈ ಜವಾನ್, ಜೈ ಕಿಸಾನ್” ಎನ್ನುವ ಮಂತ್ರ ಭಾರತದ ಅಭಿವೃದ್ಧಿಗೆ ರೈತ ಮತ್ತು ಸೈನಿಕರು ಎಷ್ಟು ಮುಖ್ಯರೆನ್ನುವುದನ್ನು ನಿರೂಪಿಸಿದರು. ಈ ಇಬ್ಬರು ಮಹನೀಯರ ಬದುಕು ನಮಗು ಹಾಗೂ ನಮ್ಮ ಮುಂದಿನ ಪೀಳಿಗೆಗೂ ಸಹಾ ಆದರ್ಶನೀಯವಾಗಿದೆ ಎಂದು ಅಮರೇಶ್.ಜಿ.ಕೆ ತಹಶೀಲ್ದಾರರು ಸ್ಮರಿಸಿದರು.
ಈ ಸಮಯದಲ್ಲಿ “ಭಾರತದ ಸತ್ಪ್ರಜೆಯಾದ ನಾನು, ನಮ್ಮ ವಿಜಯನಗರ ಜಿಲ್ಲೆಯನ್ನು ಸ್ವಚ್ಛ ಹಸಿರು ಜಿಲ್ಲೆಯನ್ನಾಗಿ ಮಾಡಲು ಸದಾ ಶ್ರಮಿಸುತ್ತೇನೆ. ಪೌರ ಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳುತ್ತೇನೆ. ನಮ್ಮ ಸುತ್ತ ಮುತ್ತಲ ಪರಿಸರವನ್ನು ಸ್ವಚ್ಚವಾಗಿಡುತ್ತೇನೆ. ಈ 155ನೇಯ ಗಾಂಧಿ ಜಯಂತಿ ದಿನದಂದು ವಿಜಯನಗರವನ್ನು ಸ್ವಚ್ಚ ಜಿಲ್ಲೆಯನ್ನಾಗಿ ಮಾಡಲು ಪಣ ತೊಡುತ್ತೇನೆ ಎಂದು ಸ್ವಚ್ಚತಾ ಪ್ರತಿಜ್ಞೆಯನ್ನು ಭೋಧಿಸಿದರು.
ಕಾರ್ಯಕ್ರಮದಲ್ಲಿ ಶಿರಸ್ತೆದಾರರಾದ ಅನ್ನದಾನೇಶ ಬಿ.ಪತ್ತಾರ್, ಕಂದಾಯ ನಿರೀಕ್ಷಕ ಹಾಲಸ್ವಾಮಿ, ಶಿಕ್ಷಣ ಇಲಾಖೆಯ ಇಸಿಒ ನಿಂಗಪ್ಪ,ಸಿ ಆರ್ ಪಿ ಗಳಾದ ಅಣಜಿ ಸಿದ್ದಲಿಂಗಪ್ಪ, ರವಿಕುಮಾರ್, ಸಂದೀಪ್, ನಾಗರತ್ನ, ಗಿರಿಜಾ ಬಣಕಾರ, ಕೊಟ್ರೇಶ್, ಸಿಬ್ಬಂದಿಯಾದ ಮಂಗಳ ಅರಮನೆ, ಮಂಜಮ್ಮ, ಹನಮಂತ, ಭೂಮಾಪಕ ಸಿಬ್ಬಂದಿ ಹಾಗು ಇತರರು ಹಾಜರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.