ಶಿವಮೊಗ್ಗ : ನಾಡಹಬ್ಬ ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಕಡೆಯ ಹಂತದ ತಯಾರಿಗಳು ನಡೆಯುತ್ತಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯು ಸರ್ವ ಸನ್ನದ್ಧವಾಗಿದೆ.
- 10 ದಿನಗಳ ಕಾಲ ನಡೆಯುವ ವೈಭವದ ದಸರಾ ಉತ್ಸವದಲ್ಲಿ 68ಕ್ಕೂ ಹೆಚ್ಚು ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ವಿವಿಧ ವೇದಿಕೆಗಳಲ್ಲಿ ನಡೆಯಲಿದೆ.
- ಸಾವಿರಾರು ಕಲಾವಿದರು ಈ ಬಾರಿಯ ಅದ್ದೂರಿ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ.
- ಈಗಾಗಲೇ ಮಹಾನಗರ ಪಾಲಿಕೆಯ ವತಿಯಿಂದ 14 ಸಮಿತಿಗಳು ರಚನೆಯಾಗಿದ್ದು, ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
- ಈ ಬಾರಿ ವಿಶೇಷವಾಗಿ ಶಿಕ್ಷಣ ಇಲಾಖೆಯ ಸಹಕಾರದಿಂದ ಮಕ್ಕಳ ದಸರಾ ನಡೆಯಲಿದ್ದು 26 ಸಾವಿರ ಮಕ್ಕಳು ಭಾಗವಹಿಸಲಿದ್ದಾರೆ.
- ಶಿವಮೊಗ್ಗ ದಸರಾದಲ್ಲಿ ಇದೇ ಮೊದಲನೇ ಬಾರಿ ಗಮಕ ದಸರಾ, ಪತ್ರಿಕಾ ದಸರಾ, ಹಾಗೂ ಪೌರಕಾರ್ಮಿಕರ ದಸರಾ ನಡೆಸಲು ತೀರ್ಮಾನಿಸಲಾಗಿದೆ. ವಿಶೇಷವಾಗಿ ಪೌರಕಾರ್ಮಿಕರ ದಸರಾ ಆಲೋಚನೆಯೂ ತುಂಬಾ ಸಂತೋಷ ತಂದುಕೊಟ್ಟಿದೆ.
- 9 ದಿನಗಳ ಕಾಲ ಧಾರ್ಮಿಕ ಕಾರ್ಯಗಳು ನಡೆಯಲಿವೆ.
- ಅಕ್ಟೋಬರ್ 10 ರಂದು ನಡೆಯಲಿರುವ ಸಾಂಸ್ಕೃತಿಕ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ಕನ್ನಡ ಚಿತ್ರರಂಗದ ಖ್ಯಾತ ನಟಿಯಾದ ಮಾಲಾಶ್ರೀ ಅವರು ಆಗಮಿಸಲಿದ್ದಾರೆ.
- ಅಕ್ಟೋಬರ್ 11ರಂದು ನಡೆಯಲಿರುವ ಸಾಂಸ್ಕೃತಿಕ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ಕನ್ನಡ ಚಿತ್ರರಂಗದ ನಟಿಯಾದ ಶ್ರೀಮತಿ ಭವ್ಯ ಅವರು ಆಗಮಿಸಲಿದ್ದಾರೆ.
- ದಿನಾಂಕ 3ರಂದು ಕೋಟೆ ದುರ್ಗಮ್ಮ ದೇವಸ್ಥಾನದಲ್ಲಿ ವೈಭವತವಾಗಿ ಉದ್ಘಾಟನೆ ನೆರವೇರಲಿದೆ.
- ಸಕ್ರೆಬೈಲ್ ನಿಂದ 3 ಆನೆಗಳು ಬರಲಿದ್ದು ತಾಯಿ ಚಾಮುಂಡೇಶ್ವರಿ ಅಂಬಾರಿ ಉತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ನಡೆಯಲಿದೆ.
- ದಿನಾಂಕ 12ರಂದು ಶಿವಪ್ಪ ನಾಯಕ ಅರಮನೆಯಿಂದ ನಂದಿ ಧ್ವಜಕ್ಕೆ ಪೂಜೆಯ ನಂತರ ದೇವಾನು-ದೇವತೆಗಳ ಅಭೂತಪೂರ್ವ ಉತ್ಸವ ಪ್ರಾರಂಭವಾಗಲಿದೆ.
- ದಿನಾಂಕ 12ರಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಸಂಜೆ ಆರು ಮೂವತ್ತಕ್ಕೆ ಬನ್ನಿ ಮೂಡಿಯೋ ಕಾರ್ಯಕ್ರಮ ನೆರವೇರಲಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ