ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸುಕ್ಷೇತ್ರ ಮಹಾಲಿಂಗಪುರದ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ಯ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಂಸ್ಕೃತಿಯ ಉತ್ಸವ ಸಂಘ ಇವರ ಬಳಗದಲ್ಲಿ ಶ್ರೀದೇವಿ ಪುರಾಣ ಹಾಗೂ ದಸರಾ ಸಂಸ್ಕೃತಿಯ ಉತ್ಸವವು ದಿನಾಂಕ 3 -10 2024 ರಿಂದ 11-10-2024ರ ವರೆಗೆ ನಡೆಯಲಿದೆ.
ಇಂದು ಮುಂಜಾನೆ ಕುಂಭಮೇಳ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಶ್ರೀದೇವಿ ಮೂರ್ತಿ ಹಾಗೂ ದೇವರ ದಾಸಿಮಯ್ಯ ಮೂರ್ತಿಯ ಮೆರವಣಿಗೆ ಮೂಲಕ ಶ್ರೀ ಸಿದ್ಧಾರೂಢ ಆಶ್ರಮದಿಂದ ಶ್ರೀ ಬನಶಂಕರಿ ದೇವಿ ದೇವಸ್ಥಾನದ ರವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟೆ ಸಹಕಾರದೊಂದಿಗೆ ಅತಿ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ಕರ್ನಾಟಕ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ, ಶ್ರೀ ಷ, ಬ್ರ, ಅಭಿನವ ರೇವಣಸಿದ್ಧ ಪಟ್ಟದೇವರು ಗುರು ಹಿರೇಮಠ ಮೈನ್ಡರಗಿ ಸೋಲಾಪುರ್ ಹಾಗೂ ಶ್ರೀ ಸಹಜಾನಂದ ಮಹಾಸ್ವಾಮಿಗಳು ಮಹಾಲಿಂಗಪುರ, ಶ್ರೀ ಅನ್ನದಾನಿ ಮಹಾಸ್ವಾಮಿಗಳು ಬೆಂಗಳೂರು, ಬನಹಟ್ಟಿ ನಗರದ ಸೋಮಶೇಖರ್ ಗೊಂಬಿ ಮತ್ತು ಇನ್ನೂ ಅನೇಕ ಊರಿನ ಹಿರಿಯರು ಗಣ್ಯಮಾನ್ಯರು ಉಪಸ್ಥಿತರಿದ್ದರು.
ವರದಿ ಮಹಿಬೂಬ್ ಎಂ ಬಾರಿಗಡ್ಡಿ