ಪಾವಗಡ : ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ನೀಡಲು ಕೃಷಿ ಇಲಾಖೆ ಅರ್ಜಿ ಆಹ್ವಾನಿಸಲಾಗಿದೆ.
ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲ ವಾಗುವಂತೆ ಕೃಷಿ ಇಲಾಖೆ, ಕೃಷಿಯಾಂತೀಕರಣ ಯೋಜನೆ ಅಡಿ
ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 50 ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರೈತರಿಗೆ ಶೇಕಡಾ 90 ರಷ್ಟು ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದರು.
ಕೃಷಿಯಾಂತೀಕರಣ ಯೋಜನೆ ಅಡಿಯಲ್ಲಿ
ಉಳುಮೆಯಿಂದ ಕೊಯ್ಲಿನವರಿಗೆ ಉಪಯುಕ್ತವಿರುವ 5 ಹಲ್ಲಿನ ನೇಗಿಲು 9 ಹಲ್ಲಿನ ನೇಗಿಲು ರೋಟೋವೇಟರ್, ಬೀಜ ಮತ್ತು ಗೊಬ್ಬರ ಬಿತ್ತನೆ ಕೂರಿಗೆ, ಗುಣಿ ತೆಗೆಯುವ ಯಂತ್ರ, ಕೇಜ್ ವೀಲ್,ಅಂತರ ಬೇಸಾಯ ಉಪಕರಣಗಳಾದ
ಪವರ್ ವೀಡರ್, ಬ್ರಷ್ ಕಟರ್, ಸಸ್ಯ ಸಂರಕ್ಷಣಾ ಉಪಕರಣಗಳಾದ ನ್ಯಾಪ್ ಸಾಕ್, ಪವರ್ ಸ್ಪೇಯರ್, ಹೆಚ್ ಟಿ ಪಿ ಸ್ಪ್ರೇಯರ್, ಟ್ರ್ಯಾಕ್ಟರ್ ಪವರ್ ಟಿಲ್ಲರ್ ಚಾಲಿತ ಸ್ಪ್ರೇಯರ್,ಓಕಣೆ ಯಂತ್ರಗಳಾದ ಬಹುಬೆಳೆ ಒಕ್ಕಣೆ ಯಂತ್ರ, ಮುಸುಕಿನ ಜೋಳ ಬಿಡಿಸುವ ಯಂತ್ರ, ನೆಲಗಡಲೆ ಬಿಡಿಸುವ ಯಂತ್ರ, ಮೇವು ಕತ್ತರಿಸುವ ಯಂತ್ರ,ಡೀಸೆಲ್ ಇರಿಗೇಶನ್ ಪಂಪ್ ಸೆಟ್ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ಪಡೆಯಬಹುದಾಗಿರುತ್ತದೆ ಎಂದರು.
ಕೃಷಿ ಉತ್ಪನ್ನ ಸಂಸ್ಕರಣ ಯೋಜನೆ ಅಡಿ ಸಂಸ್ಕರಣ ಘಟಕಗಳಾದ ರಾಗಿ ಶುದ್ಧೀಕರಣ ಯಂತ್ರ, ಹಿಟ್ಟಿನ ಗಿರಣಿ, ಫಲ್ವರೈಜರ್, ಮೆಣಸಿನಕಾಯಿ ಪುಡಿ ಮಾಡುವ ಯಂತ್ರ, ಶಾವಿಗೆ ಮಾಡುವ ಯಂತ್ರ, ಕಬ್ಬಿನ ಹಾಲು ತೆಗೆಯುವ ಯಂತ್ರಗಳನ್ನು ಸಾಮಾನ್ಯ ವರ್ಗದ ರೈತರು ಶೇಕಡ 50ರಷ್ಟು ಸಹಾಯಧನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 90ರಷ್ಟು ಸಹಾಯಧನದಲ್ಲಿ ಪಡೆಯಬಹುದೆಂದರು.
ಸದರಿ ಯೋಜನೆಯಡಿ ಸಣ್ಣ ಯಂತ್ರ ಚಾಲಿತ
ಎಣ್ಣೆಗಾಣಗಳನ್ನು ಸಾಮಾನ್ಯ ವರ್ಗದ ರೈತರು 75ರಷ್ಟು ಸಹಾಯಧನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 90ರಷ್ಟು ಸಹಾಯಧನದಲ್ಲಿ ಪಡೆಬಹುದೆಂದರು.
ಮೇಲ್ಕಂಡ ಯೋಜನೆಗಳ ಅಡಿ ಪ್ರಯೋಜನ ಪಡೆಯಲು ಬಯಸುವ ಅರ್ಹ ರೈತರು ನಮೂನೆಯ ಅರ್ಜಿಯ ಜೊತೆ ಪಹಣಿ,ಆಧಾರ್, ಬ್ಯಾಂಕ್ ಪಾಸ್ ಬುಕ್, ಭಾವಚಿತ್ರ ಜಾತಿ ಪ್ರಮಾಣ ಪತ್ರ
( ಎಸ್ ಸಿ. ಎಸ್ ಟಿ ) ಪ್ರತಿಗಳೊಂದಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದೆಂದು ಸಹಾಯಕ ಕೃಷಿ ನಿರ್ದೇಶಕರಾದ ಅಜಯ್ ಕುಮಾರ್ ಆರ್ ರವರು ತಾಲ್ಲೂಕಿನ ರೈತ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವರದಿ ಪಾವಗಡ.ಕೆ.ಮಾರುತಿ ಮುರಳಿ