ವಿಜಯಪುರ: ಕಡ್ಡಾಯ ಮತ್ತು ಸಂವಿಧಾನ ಬದ್ಧ ನಾಗರಿಕರ ಹಕ್ಕಾದ ಮಹಾನಗರ ಪಾಲಿಕೆಯಿಂದ ಕೂಡಲೇ ಪ್ರತಿ ವಾರ್ಡನಲ್ಲಿ ವಾರ್ಡ್ ಸಮಿತಿ ರಚನೆಗೆ ಅರ್ಜಿ ಆಹ್ವಾನಿಸಲು ಮಹಾನಗರ ಪಾಲಿಕೆಯ ಆಯುಕ್ತರಿಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲು ನಗರದ ಪಜ್ಞಾವಂತ ನಾಗರಿಕರು ಮುಂದೆ ಬರಬೇಕೆಂದು ವಾರ್ಡ್ ಸಮಿತಿ ಬಳಗ ಜಿಲ್ಲಾ ಸಂಚಾಲಕ, ನ್ಯಾಯವಾದಿ ದಾನೇಶ ಅವಟಿ ಕರೆ ನೀಡಿದರು.
ನಗರದ ರೈಲು ನಿಲ್ದಾಣ ರಸ್ತೆಯ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನವ ಚೈತನ್ಯ ಸಭಾಂಗಣದಲ್ಲಿ
ವಿಜಯಪುರ ನಗರ ಸ್ಲಂ ಅಭಿವೃದ್ಧಿ ಒಕ್ಕೂಟ (ರಿ.) ವಿಜಯಪುರ ವತಿಯಿಂದ ಏರ್ಪಡಿಸಿದ್ದ ‘ಮಹಾನಗರ
ಪಾಲಿಕೆಯ ವಾರ್ಡ್ ಸಮಿತಿ ರಚನೆ ಮತ್ತು ನಾಗರಿಕರ ಸಬಲೀಕರಣ”ಕುರಿತು ಮಹತ್ವಪೂರ್ಣ ಸಭೆಯನ್ನು
ಉದ್ದೇಶಿಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೇಳು ವರ್ಷ ಕಳೆದರೂ ಸಾರ್ವಜನಿಕರು
ಇನ್ನೂ ನೀರು, ರಸ್ತೆ, ಬೀದಿ ದೀಪ, ಮೂಲಭೂತ ಸೌಕರ್ಯಗಳನ್ನು ಪಡೆಯಲು ಬೀದಿಗಿಳಿದು ಹೋರಾಟ
ಮಾಡುತ್ತಿರುವದು ದುರ್ದೈವದ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು.ಆಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದು ಅತ್ಯವಶ್ಯ
ಕಾರಣ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ರಚನೆಗೊಳ್ಳುವ, ಜನಪ್ರತಿನಿಧಿಗಳು, ಅಧಿಕಾರಿಗಳು
ಸಾರ್ವಜನಿಕರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ನಗರ ವಾರ್ಡ್ ಸಮಿತಿ ರಚನೆಗೆ
ನಾಗರಿಕರೆಲ್ಲರೂ ಕೈ ಜೋಡಿಸಬೇಕೆಂದು ವಿನಂತಿಸಿದರು.
ವಿಜಯಪುರ ನಗರ ಸ್ಲಂ ಅಭಿವೃದ್ಧಿ ಒಕ್ಕೂಟ ಅಧ್ಯಕ್ಷ ಅಕ್ರಂ ಮಾಶ್ಯಾಳಕರ ಮಹಾತ್ಮ ಗಾಂಧೀಜಿ ಹಾಗೂ
ಲಾಲ್ ಬಹದ್ದೂರ್ ಶಾಸ್ತಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಗೈದು ಮಾತನಾಡಿ, ಮಹಾತ್ಮ ಗಾಂಧೀಜಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರಂಥ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಸತ್ಯ ಶಾಂತಿ ತ್ಯಾಗ ಬಲಿದಾನ ಮೂಲಕ ರಕ್ತ ಪಾತವಿಲ್ಲದೆ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಅದನ್ನು ನಾವು ಬಳಸುವಾಗ ಅವರ ಉದ್ದೇಶ ತತ್ವ ಸಿದ್ದಾಂತ ಅರಿತು ಅಳವಡಿಸಿಕೊಂಡು ಜೀವನ ಮಾಡಬೇಕು ಅಕ್ರಮ ಮಾಶಾಡಕರ್ ಹೇಳಿದರು.
ವರದಿ:ರಜಾಕ್ ಸಾಬ ಹೊರಕೇರಿ