ಕೊಪ್ಪಳ:ಮೊನ್ನೆ ರಾತ್ರಿ ನಿರಂತರ ಸುರಿದ ಮಳೆಗೆ ಚಾವಣಿ ಕುಸಿದು ಕ್ರೀಡಾಪಟು ಮ್ಯಾರಾಥಾನ್ ಓಟಗಾರ ಪ್ರಕಾಶ ಶ್ರೇಷ್ಟಿ ಅವರ ಮೇಲೆ ಬಿದ್ದು ಗಂಭೀರ ಗಾಯಗೊಂಡ ಪ್ರಕಾಶರನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದು ವಡ್ಡರಹಟ್ಟಿಯ ಗಡ್ಡಿ ಭೀಮಪ್ಪ ಧಣಿಯವರು ಆಸ್ಪತ್ರೆಗೆ ಬಂದು ಪ್ರಕಾಶ ಅಣ್ಣನವರ ಯೋಗ ಕ್ಷೇಮ ವಿಚಾರಿಸಿ ಅವರಿಗೆ ಚಿಕಿತ್ಸೆಗೆ ಸಹಕಾರಿಯಾಗಲೆಂದು 25000 ಸಾವಿರ ವನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಘಟನೆ ನೆಡದ ತಕ್ಷಣ ಸುದ್ದಿ ತಿಳಿದು ಗ್ಯಾರಂಟಿ ಯೋಜನಾ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ ರೆಡ್ಡಿಯವರು ತಮ್ಮ ಸ್ವ -ಇಚ್ಚೆಯಿಂದ 5000 ಸಾವಿರ ನೀಡಿ ಆಸ್ಪತ್ರೆಯ ಖರ್ಚಿಗೆ ಸಹಕರಿಸಿದ್ದಾರೆ.
ಈ ವೇಳೆಯಲ್ಲಿ ಸಂದರ್ಭದಲ್ಲಿ ಹಿರಿಯರಾದ ಗಡ್ಡಿ ಭೀಮಪ್ಪ , ಬಿ ಪಕೀರಪ್ಪ ,ರೆಡ್ಡಿ ಶ್ರೀನಿವಾಸ , ಮಲ್ಲನಗೌಡ ,ಗಡ್ಡಿ ಹನುಮಂತಪ್ಪ , ನಾಗಪ್ಪ ,ಅಯ್ಯಪ್ಪ, ಈರಪ್ಪ ,ಬಿ.ಹನುಮೇಶ ಇತರರು ಭಾಗಿ ಇದ್ದರು.