ವಿಜಯನಗರ:ವಿಜಯನಗರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಲಯದಲ್ಲಿ ಜನರನ್ನು ನಿಯಂತ್ರಿಸಲು ಹಾಗೂ ಅವರಿಗೊಂದು ಕೂರಲು ಆಸನದ ಸೌಲಭ್ಯ ಕಲ್ಪಿಸುವಲ್ಲಿಯೂ ಯಡವಿದ ವಿಜಯನಗರ ಜಿಲ್ಲಾಸ್ಪತ್ರೆ ಕೊಠಡಿ ಸಂಖ್ಯೆ 50 ರ ಪ್ರಯೋಗಾಲಯಕ್ಕೆ ಬಂದಂತಹ ರೋಗಿಗಳ ಪಾಡು ಹೇಳುವವರಿಲ್ಲ, ಕೇಳುವವರಿಲ್ಲ ಸರಿಯಾದ ಸಾಲಿನಲ್ಲಿ ಬಿಡದ ಸಿಬ್ಬಂದಿ ತಮಿಚ್ಚೆಯಂತೆ ವರ್ತಿಸುವುದಲ್ಲದೆ, ಜನರನ್ನು ಗದರಿಸಿ ಬೈಯುವುದು ಕಂಡು ಬಂದಿತು.
ಕೂರಲು ಸರಿಯಾದ ಆಸನ ವ್ಯವಸ್ಥೆ ಇಲ್ಲದೆ ವೃದ್ಧರು, ಮಹಿಳೆಯರು,ವಯಸ್ಕರು ನಿಂತುಕೊಂಡೆ ಯಾತನೆಯನ್ನು ಅನುಭವಿಸುವಂತಹ ಹೀನಾಯ ಪರಿಸ್ಥಿತಿ ಬಂದೊದಗಿದೆ. ಸಂಭಂದಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ಆದಷ್ಟು ಬೇಗ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಹಾಗೂ ಶಿಸ್ತು ಪಾಲನೆ ನಿರ್ವಹಿಸುವಂತೆ ಅಲ್ಲಿನ ಸಿಬ್ಬಂದಿಗಳಿಗೆ ತಿಳಿಸಿಕೊಡಬೇಕು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ