ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಆನೆಗಳನ್ನು ತಕ್ಷಣ ಸ್ಥಳಾಂತರಿಸುವಂತೆ ರೈತರ ಪ್ರತಿಭಟನೆ

ಶಿವಮೊಗ್ಗ : ತಾಲ್ಲೂಕಿನ ಅರಸಾಳು, ಬೇಳ್ಳೂರು ತಮ್ಮಡಿಹಳ್ಳಿ, ಸಿರಿಗೆರೆ, ಹೆದ್ದಾರಿಪುರ, ಸೇರಿದಂತೆ ಸುತ್ತಮುತ್ತ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳು ಗುಂಪು ಗುಂಪಾಗಿ ಬಂದು ಬೆಳೆನಾಶ ಮಾಡುವುದಲ್ಲದೇ ರೈತರ ಮೇಲೆ ದಾಳಿ ಮಾಡುತ್ತಿದ್ದು ಜನರು ದಿನ ನಿತ್ಯ ಆತಂಕದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ವಲಯ ಅರಣ್ಯ ಅಧಿಕಾರಿಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರೈತರು ಬೆಳೆದ ಬೆಳೆಗಳು ಮೆಕ್ಕಜೋಳ, ಬಾಳೆ,ಅಡಿಕೆ ನಾಶ ಪಡಿಸಿ ರೈತನಿಗೆ ಅಪಾರ ನಷ್ಟ ಉಂಟು ಮಾಡುತ್ತಿವೆ ಅಲ್ಲದೇ ಕೆಲವು ಗ್ರಾಮಗಳಿಗೆ ನುಗ್ಗಿದ ಉದಾಹರಣೆಗಳು ಸಹ ಇವೆ ಈ ರೀತಿಯಾಗಿ ಪದೇ ಪದೇ ದಾಳಿ ಮಾಡುತ್ತಿರುವುದರಿಂದ ರೈತರು ಜೀವನ ಮರಣದ ಭಯದಿಂದ ಆತಂಕದಿಂದ ಬದುಕುತ್ತಿದ್ದಾರೆ. ಆದ್ದರಿಂದ ತಕ್ಷಣ ಇವರಿಗೆ ರಕ್ಷಣೆ ಒದಗಿಸುವುದರ ಜೊತೆಗೆ ಸೂಕ್ತ ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು ಮತ್ತು ಜಮೀನಿಗೆ ಗ್ರಾಮದೊಳಗೆ ಅನೆಗಳು ಬಾರದ ಹಾಗೆ ತಡೆಯಬೇಕು. ತತಕ್ಷಣದಿಂದ ಇವುಗಳನ್ನು ಕಾಡಿಗೆ ಕಳುಹಿಸುವ ಕೆಲಸ ಮಾಡಬೇಕು.ಈ ವ್ಯವಸ್ಥೆ ಮಾಡುವುದಲ್ಲದೇ ರೈತರ ಜಮೀನಿಗೆ ಬರುತ್ತಿರುವ ಆನೆಗಳನ್ನ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯಕ್ಕೆ ಬೆಳಕು ನೀಡಿ ತಮ್ಮ ಸ್ವಂತ ಜಾಗವನ್ನು ಬಿಟ್ಟುಕೊಟ್ಟು ಗ್ರಾಮಸ್ಥರು ಇಲ್ಲಿನ ಹಳ್ಳಿಗಳಲ್ಲಿ ತಮ್ಮ ಜೀವನ ನೆಲೆಯನ್ನ ಕಟ್ಟಿಕೊಳ್ಳುತ್ತಿರುವ ಜನರ ಹಾಗೂ ಪ್ರಾಣಿಗಳ ಮಧ್ಯೆ ಇತ್ತೀಚ್ಚಿನ ದಿನಗಳಲ್ಲಿ ಸಂಘರ್ಷ ನಡೆಯುತ್ತಲೇ ಇದೆ. ಈ ಬಗ್ಗೆ ಕೆಲ ರೈತ ಸಂಘಗಳು ಸರ್ಕಾರದ ಜೊತೆ ಮಾತುಕತೆ ನಡೆಸಿ ಒತ್ತಾಯ ಮಾಡಿದ್ದರೂ, ಸರ್ಕಾರ ರೈತರ ಪರ ಕಾಳಜಿ ವಹಿಸುತ್ತಿಲ್ಲ ರೈತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿವೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಂಭಂದ ಪಟ್ಟ ಜನಪ್ರತಿನಿಧಿಗಳು ಆಧಿಕಾರಿಗಳ ಜೊತೆ ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳು ಬಗೆ ಹರಿಯದಿದ್ದರೆ ಎಲ್ಲಾ ರೈತರು ಸೇರಿ ಪಾದಯಾತ್ರೆ ಮಾಡಿ ಧರಣಿ ನಡೆಸಲಾಗುವುದು,ಅದ್ದರಿಂದ ದಯಮಾಡಿ ಕೂಡಲೇ ಈ ಸಂಘರ್ಷವನ್ನು ತಪ್ಪಿಸಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸಿದರು.
ಇಲ್ಲಿನ ಸುತ್ತಮುತ್ತ ಇರುವ ಆನೆಗಳನ್ನು ತಕ್ಷಣ ಸ್ಥಳಾಂತರ ಮಾಡಬೇಕು ,ಆರಣ್ಯ ಇಲಾಖೆ ಹಾಗೂ ಆಧಿಕಾರಿಗಳು ರೈತರಿಗೆ ಕಿರುಕುಳ ಹಾಗೂ ನೋಟಿಸ್ ನೀಡಿ ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿದರು.
ಸಂದರ್ಭದಲ್ಲಿ ದೇವರಾಜ್ ಮತ್ತಿಕೊಪ್ಪ, ಮಹೇಂದ್ರ ಬುಕ್ಕಿವರೆ, ಪ್ರವೀಣ್ ಲಕ್ಸ್ಮಿಕಾಂತ್, ಅರುಣ್ ಕಟ್ಟೆ, ಪುನೀತ್ ಬೆಳ್ಳೂರು, ಚಂದ್ರಶೇಟ್ಟಿ, ರೈಸ್ ಮಿಲ್ ಮಾಲೀಕರಾದ ಶಂಕರ್, ಪ್ರವೀಣ್, ಕೃಷ್ಣ ಮೂರ್ತಿ ಮಂಜು ಕುಲಾಲ್ ಉಮೇಶ್ ಬಸವಪುರ ಸೇರಿದಂತೆ ಗ್ರಾಮಸ್ಥರು ಭಾಗವಸಿದ್ದರು.

ಅರಣ್ಯ ಅಧಿಕಾರಿ ನಿರ್ಲಕ್ಷ, ರೈತರಿಂದ ರಸ್ತೆ ತಡೆ:

ಆನೆ ಕಾಟವನ್ನು ತಡೆಯುವಂತೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ ಮೆರವಣಿಗೆ ಮೂಲಕ ಅರಣ್ಯ ಅಧಿಕಾರಿಗೆ ಮನವಿ ಸಲ್ಲಿಸಲು ಹೋದಾಗ ಅಧಿಕಾರಿಗಳು ರೈತರನ್ನು ನಿರ್ಲಕ್ಷ್ಯ ಮಾಡಿದ್ದಾರೆಂದು ಮನವಿ ಸ್ವೀಕರಿಸಲು ತಡಮಾಡಿರುವುದಕ್ಕೆ ರೈತರು ಕೋಪಗೊಂಡು ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ಪೊಲೀಸರು ಸ್ಥಳಕ್ಕೆ ಬಂದು ರೈತರನ್ನು ಮನವಲಿಸಿ ಮನವಿ ಸಲ್ಲಿಸಿಸುವಂತೆ ಸೂಚನೆ ನೀಡಿದ ಮೇಲೆ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆ ನಡೆಯಿತು.

ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅತಿವೃಷ್ಟಿಯಿಂದ ಬೆಳೆನಷ್ಟ ಜೊತೆಗೆ ಆನೆ ದಾಳಿಯಿಂದ ಮತ್ತಷ್ಟು ಸಂಕಷ್ಟ ಬಂದೊದಗಿದೆ, ಇಲ್ಲಿನ ರೈತರಿಗೆ ಪ್ರತಿದಿನ ಸಂಕಷ್ಟದಲ್ಲಿ ಜೀವನ ಸಾಗಿಸುವ ಅನಿವಾರ್ಯತೆ ಉಂಟಾಗಿದೆ ಆದ್ದರಿಂದ ಮುಖ್ಯಮಂತ್ರಿ ಗಳು ಶೀಘ್ರದಲ್ಲಿ ಕ್ರಮ ಕೈಗೊಂಡು ರೈತರ ಸಹಕರಿಸಿಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್ ,ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ