ಚಾಮರಾಜನಗರ:ರಾಜಧನ ವಂಚಿಸಿ ಕೇರಳ ರಾಜ್ಯಕ್ಕೆ ಕ್ರಷರ್ ಉತ್ಪನ್ನಗಳನ್ನು ಸಾಗಣೆ ಮಾಡುತ್ತಿರುವುದನ್ನು ತಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಇಂದು ಪೋಲಿಸ್ ಇಲಾಖೆ, ತಹಶೀಲ್ದಾರರು, ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮತ್ತು ಸಾರಿಗೆ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಒಂದು ಲಾರಿಗೆ ರಾಜಧನ (ರಾಯಲ್ಟಿ) ಪಡೆದು ಸುಮಾರು 5 ಲಾರಿಗಳಿಗೆ ಒಂದೇ ರಾಯಲ್ಟಿಯನ್ನು ಉಪಯೋಗಿಸಿ ಸರ್ಕಾರಕ್ಕೆ ವಂಚಿಸುವುದು ಅಲ್ಲದೆ ಸರ್ಕಾರ ನಿಗದಿಪಡಿಸಿದ ತೂಕಕ್ಕಿಂತ ಹೆಚ್ಚಾಗಿ ಸಾಗಣೆ ಮಾಡುತ್ತಿರುವುದನ್ನು ನಿಲ್ಲಿಸಬೇಕೆಂದು ಹಾಗೂ ಹೆಚ್ಚು ಬಾಡಿ ಲೆವೆಲ್ ಗಿನ್ನ ಹೆಚ್ಚಾಗಿ ಕಲ್ಲುಗಳನ್ನು ತುಂಬಿಕೊಂಡು ಹೋಗುವ ಸಂದರ್ಭದಲ್ಲಿ ಕಲ್ಲು ಬೀಳುವ ಸಾಧ್ಯತೆ ಇದ್ದು ಇದರಿಂದ ಪ್ರಾಣಿಗಳ ಜೀವಕ್ಕೆ ಹಾನಿಯುಂಟಾಗುವ ಸಂಭವ ಹೆಚ್ಚಾಗಿದ್ದು ಅಲ್ಲದೆ ರಸ್ತೆಗಳು ಸಹ ಹಾಳಾಗುತ್ತವೆ ಎಂದು ತಾಲ್ಲೂಕು ಅಧ್ಯಕ್ಷರಾದ ರಮೇಶ್ ನಾಯಕ್ ರವರು ದೂರಿದರು ಕೂಡಲೇ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಯುತು.
ಈ ಸಂಧರ್ಭದಲ್ಲಿ ಟೌನ್ ಘಟಕದ ಅಧ್ಯಕ್ಷರಾದ ರಾಜೇಂದ್ರ ವಿ ನಾಯಕ್, ತಾಲ್ಲೂಕು ಉಪಾಧ್ಯಕ್ಷರಾದ ಕಾರ್ತಿಕ್ ಗೌಡ, ಶಿವಮೂರ್ತಿ, ನಾಗರಾಜು, ಕೃಷ್ಣ, ಚನ್ನ ನಾಯಕ, ಯುವಘಟಕದ ಅಧ್ಯಕ್ಷರಾದ ಮೌನೇಶ್, ಕೆಲಸೂರು ಸ್ವಾಮಿ, ನಾಗೇಂದ್ರ, ವಸಂತ್ ಚನ್ನಪ್ಪ, ಹಾಗೂ ಜಾರಕಿಹೊಳಿ ಬ್ರಿಗೇಡ್ ನ ಗೋವಿಂದರಾಜು ರವರು ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್