ಕೊಪ್ಪಳ: ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಕೆ ಲಮಾಣಿ ಅಭಿಪ್ರಾಯ ಪಟ್ಟರು.
ನವೆಂಬರ್ ಒಂದರಂದು ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ೬೯ ನೆಯ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದುರೆದು ಮಾತನಾಡಿದ ಅವರು
ಕನ್ನಡ ಭಾಷೆಗೆ ಎಲ್ಲೋ ಧಕ್ಕೆ ಉಂಟಾದಂತೆ ಕಂಡು ಬರುತ್ತಿದೆ. ಹಾಗಾಗದಂತೆ ಅದನ್ನು ತಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ನಿರ್ವಹಿಸುವ ಅಗತ್ಯತೆ ಇದೆ ಎಂದು ಅವರು ತಿಳಿಸಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ
ಡಾ.ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ಹರಿದು ಹಂಚಿ ಹೋಗಿದ್ದ ಮೈಸೂರು ಕರ್ನಾಟಕವನ್ನು ಒಗ್ಗೂಡಿಸಿ ಒಂದು ಸಮಸ್ತ ನಾಡನ್ನು ಕಟ್ಟುವ ಆಲೋಚನೆಯನ್ನು ಅಂದಿನ ಹೋರಾಟಗಾರರನ್ನು ಇಂದು ನಾವು ಸ್ಮರಿಸುವ ಜರೂರತ್ತಿದೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ನಾಡು, ನುಡಿ, ಜಲ ಅಕ್ಷರತೆಯ ಮಹತ್ವ ತಿಳಿಸುವ ಜವಾಬ್ದಾರಿ ನಮ್ಮದು ಎಂದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ
ಡಾ. ನರಸಿಂಹ ಗುಂಜಹಳ್ಳಿ ಮಾತನಾಡಿ ಗಡಿ ತಕರಾರು ಈಗಲೂ ಜೀವಂತವಾಗಿ ಇರುವುದು ಶೋಚನೀಯ. ಕರ್ನಾಟಕ ಏಕೀಕರಣದ ಹೊತ್ತಿನಲ್ಲಿ ಕೆಲವು ಕನ್ನಡದ ಪ್ರಮುಖ ನಗರಗಳು ಅನ್ಯ ರಾಜ್ಯದ ಪಾಲಾಗಿವೆ ಎಂದರು.
ಇತಿಹಾಸ ವಿಭಾಗದ ಹಿರಿಯ ಉಪನ್ಯಾಸಕ
ಶ್ರೀ ಇಬ್ರಾಹಿಂ ಮಾತನಾಡಿ ಬೆಂಗಳೂರು ಹೊರತು ದಾವಣಗೆರೆ ಕರ್ನಾಟಕ ರಾಜ್ಯದ ರಾಜಧಾನಿ ಆದರೆ ಎಲ್ಲರಿಗೂ ಅನುಕೂಲ. ಆ ನಿಟ್ಟಿನಲ್ಲಿ ರಾಜಕೀಯ ತಜ್ಞರು ಆಲೋಚಿಸುವ ಸಮಯ ಬಂದಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಬಿ ಮಾತನಾಡಿ ಮಕ್ಕಳಿಗೆ ಹಳೆಗನ್ನಡ , ನಡುಗನ್ನಡದ ಜೊತೆಗೆ ಹೊಸಗನ್ನಡ ಸಹ ತಿಳಿಯುವಂತೆ ಸಂಬಂಧಿಸಿದ ಅಧ್ಯಾಪಕರು ಶ್ರಮವಹಿಸುವ ಅಗತ್ಯ ಇದೆ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥೆ ನಾಗರತ್ನ ಬಿ ತಮ್ಮಿನಾಳ, ಡಾ. ಪ್ರದೀಪ್ ಕುಮಾರ್ ಯು, ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಬಿ, ಕನ್ನಡ ಭಾಷಾ ವಿಷಯದ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿ, ದ್ವಿತೀಯ ದರ್ಜೆ ಸಹಾಯಕ ಹನುಮಂತಪ್ಪ ಮೇಟಿ, ಶಿವಪ್ಪ ಬಡಿಗೇರ್, , ಬೋಧಕೇತರ ಸಿಬ್ಬಂದಿ ಲಕ್ಷ್ಮಿ, ಚಾಂದಬಿ ಮತ್ತು ಪರಿಚಾರಕ ಗವಿಸಿದ್ದಪ್ಪ ಉಪಸ್ತಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಸಂಸ್ಕೃತಿಕ ಘಟಕದ ಸಂಚಾಲಕರಾದ ಡಾ. ಹುಲಿಗೆಮ್ಮ ನಿರ್ವಹಿಸಿದರು, ಡಾ. ಪ್ರದೀಪ್ ಕುಮಾರ್ ವಂದಿಸಿದರು.