ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಇಂದು 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಕೊಟ್ಟೂರು ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಸಹಯೋಗದಲ್ಲಿ 71ನೇ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಕೋಗಳಿ ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷರಾದ ಎನ್ ಹೇಮಗಿರಿ ಗೌಡ್ರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳ ಪಾತ್ರ ಎಂಬ ವಿಷಯವನ್ನು ಕುರಿತು ಕ್ಷೇತ್ರಧಿಕಾರಿಗಳಾದ ಎಂ ಕೊಟ್ರೇಶ್ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಐ ದಾರುಕೇಶ ಮಾತನಾಡಿ ರೈತರು ಸಹಕಾರ ಸಂಘಗಳ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಮತಿ ಮಾನಸ ಕ್ಷೇತ್ರಧಿಕಾರಿಗಳಾದ ವಿ ಎಸ್ ಪ್ರವೀಣ್, ಉಪಾಧ್ಯಕ್ಷರಾದ ರೇಖಾ ಮೋಹನ್, ತಾಲೂಕಿನ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿದ್ದರು.
ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಜೆ ಎಂ ಶಿವಪ್ರಸಾದ್ ಭಾಗವಹಿಸಿ, ಮಾತನಾಡಿದರು.
ಅಳವಂಡಿ ಕೊಟ್ರೇಶ್, ಅಂಬಳಿ ಸೋಮನಗೌಡ, ಚನ್ನವೀರಪ್ಪ, ಮಾರುತಿ ಹನುಮಂತಪ್ಪ, ರವೀಶ್, ವಿರುಪಾಕ್ಷ ಗೌಡ, ಪ್ರದೀಪ್, ಶಿರಸಪ್ಪ, ವೀರಣ್ಣ, ನಾಗರಾಜ್, ಮಂಜಣ್ಣ, ಕೊಟ್ರೇಶ, ಕೆ.ಉಮೇಶ, ಬಿ.ಕೋಟೆಪ್ಪ, ಕೆ.ರಾಜ ಸಿ. ಗೊಣ್ಣೆಪ್ಪ, ಮದನ್ ಕುಮಾರ್ ಹಾಗೂ ಊರಿನ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
ಸಹಕಾರ ಯೂನಿಯನ್ ಮುಖ್ಯ ಕಾರ್ಯ ನಿರ್ವಾಹಕರಾದ ನಾಗರಾಜ್ ನಿರೂಪಣೆ ಮಾಡಿದರು, ವೀರಭದ್ರಿ ಶೆಟ್ಟರ ಪ್ರಾರ್ಥನೆ ಹಾಡಿದರು, ವಿ ರವಿ ಸ್ವಾಗತಿಸಿ, ಬಸವರಾಜ ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ