ಬೀದರ್: ಕರ್ನಾಟಕ ದಲಿತ ಸಮಿತಿ ಸಂಘರ್ಷ (ಅಂಬೇಡ್ಕರ ವಾದ) ಜಿಲ್ಲಾ ಸಮಿತಿ ಕಾರ್ಯನಿರ್ವಾಹಕ ಸಮಿತಿ ಸಭೆಯನ್ನು
ದಿ. 16-11-2024 ರಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ ಡಾಕುಳಗಿ ರವರು ವಹಿಸಿದ್ದರು. ವಿಭಾಗೀಯ ಸಂಘಟನಾ ಸಂಚಾಲಕರಾದ ರಾಜಕುಮಾರ ಬನ್ನೇರ್, ರಾಜ್ಯ ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕರಾದ ರಂಜಿತಾ ಜೈನೂರ್ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕರಾದ ರಮೇಶ ಸಾಗರ ಮಂದಕನಳ್ಳಿ ರವರು ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ವಾಗತಿಸಿದರು.
ಈ ಸಭೆಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾಗಿ ಕೈಲಾಶ ಮೇಟಿ ಜಲಸಂಗಿ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದು, ಹೆಚ್ಚು ಸಕ್ರಿಯವಾಗಿ ನಿರ್ವಹಿಸಲು ಜವಾಬ್ದಾರಿ ನೀಡಲಾಯಿತು.
ದಿನಾಂಕ: 26-11-2024 ರಂದು ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂವಿಧಾನ ಪೀಠಿಕೆ ಓದುವುದು, 11 ಗಂಟೆಗೆ ಆಲ್ ಇಂಡಿಯಾ ಬೌದ್ಧಿಷ್ಟ ಫೋರಮ್ ವತಿಯಿಂದ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೋಧಗಯಾ ಮುಕ್ತಿ ಆಂದೋಲನದ ಪ್ರತಿ ಭಟನೆಯಲ್ಲಿ ಭಾಗವಹಿಸುವುದು ಹಾಗೂ ಸಾಯಂಕಾಲ ಅಂಬೇಡ್ಕರ ವೃತ್ತದಲ್ಲಿ ಹಮ್ಮಿಕೊಂಡಿರುವ ಸಂವಿಧಾನ ಕಾರ್ಯಕ್ರಮದಲ್ಲಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ತಪ್ಪದೇ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಝರೆಪ್ಪಾ ರಾಂಪೂರೆ, ಸುಭಾಷ ಜ್ಯೋತಿ, ಅಹ್ಮದ ಅಲಿಯಾಬಾದ, ಮಾರುತಿ ಸಿಂಧೆ, ಉಮೇಶ ಬೋರಾಳೆ, ಸೋಪಾನರಾವ ಲಾಧಾ, ವಿಠಲ ಲಾಡ್ಕಕರ್ ಸುಧಾಕರ ಮಾಳಗೆ, ಬಸವರಾಜ ಕಾಂಬಳೆ,ಸಂಜುಕುಮಾರ ಬ್ಯಾಗಿ, ಲಕ್ಷ್ಮಣ ಸೇರಿಕಾರ, ಪಾಂಡುರಂಗ ನಾಯಕ, ಫಾಳೆಪ್ಪಾ ಮಳಚಾಪೂರ, ಅಂಬಾದಾಸ ಗಾಯಕವಾಡ ಇತರರು ಉಪಸ್ಥಿತರಿದ್ದರು.
ವರದಿ : ರೋಹನ್ ವಾಘಮಾರೆ