ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ವೈದ್ಯರಾದ ಡಾ. ಸುರೇಂದ್ರ ಕುಮಾರ್ ಡಿ. ಅಣ್ಣಾವ್ರು ಅವರು ಬೆಟ್ಟದ ಹೂವು ಸೇವಾ ಸಂಸ್ಥೆವತಿಯಿಂದ ಕಾತ್ರಿಕೆಹಟ್ಟಿ ಗ್ರಾಮದಲ್ಲಿ ದಿ; 18-11-2024 ರಂದು ಗ್ರಾಮದೇವತೆ ಶ್ರೀ ಜರ್ಮಲಿ ದುರ್ಗಾದೇವಿ ಸನ್ನಿಧಿಯಲ್ಲಿ ಜನರಿಗೆ ಆರೋಗ್ಯ ಮತ್ತು ಜೀವನ ಮೌಲ್ಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸಭೆಯನ್ನು ಹಮ್ಮಿಕೊಂಡಿದ್ದರು. ವಿಡಿಯೋ ಹಾಗೂ ಆಡಿಯೋ ಮೂಲಕ ಕ್ಷಯ ಮತ್ತು ಕುಷ್ಠರೋಗಗಳು ಬಂದಾಗ ತಮ್ಮನ್ನು ಹೇಗೆ ರಕ್ಷಿಸಬೇಕು ಎಂಬ ಹಿನ್ನೆಲೆಯಲ್ಲಿ ವೈದ್ಯರು ಅರಿವು ಮೂಡಿಸಿ ಎಂದು ತಿಳಿ ಹೇಳಿದರು. ಅದರ ಜೊತೆಗೆ ಕೆಲವು ಜರನ್ನು ತಪಾಸಣೆಗೆ ಒಳಪಡಿಸಿ ರಕ್ತ ಮತ್ತು ರಕ್ತದೊತ್ತಡ ಪರೀಕ್ಷೆ ಮಾಡಿ ಔಷಧಿ ನೀಡಿ, ಸ್ವಚ್ಛತೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು ಎಂದರು.
ಬೆಟ್ಟದ ಹೂವು ಸೇವಾ ಸಂಸ್ಥೆ, ತಾಯಕನಹಳ್ಳಿ, ಕೂಡ್ಲಿಗಿ ತಾಲೂಕು, ವಿಜಯನಗರ ಜಿಲ್ಲೆ (ರಿ.) ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹೂಡೇಂ ಹಾಗೂ ಗ್ರಾಮ ಪಂಚಾಯತಿ, ಹೂಡೇಂ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 24-11-2024 ರಂದು ಭಾನುವಾರ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ( ಬಾಯಿ, ಸ್ತನ ಮತ್ತು ಗರ್ಭಕಂಠ) ವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ವರದಿ :ಗುರುರಾಜ್ ಎಲ್,ಕಲ್ಲಹಳ್ಳಿ ಟಿ