ರಾಜ್ಯದಲ್ಲಿ ಚಡ್ಡಿ ಗ್ಯಾಂಗ್ ಆತಂಕ ಹೆಚ್ಚಾಗಿದ್ದು ನೈಟ್ ಬೀಟ್ ಹೆಚ್ಚಿಸಲು ಪೊಲೀಸ್ ಇಲಾಖೆಗೆ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.
ಮೈಸೂರು: ರಾಜ್ಯದಲ್ಲಿ ಚಡ್ಡಿ ಗ್ಯಾಂಗ್ ಕೃತ್ಯಗಳು ಹೆಚ್ಚಾಗುತ್ತಿದ್ದು ರಾತ್ರಿ ಆದರೆ ಸಾಕು ನಾಗರಿಕರಲ್ಲಿ ಕಳವಳ ಹೆಚ್ಚಾಗಿದೆ ಎಂದು
ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಚಡ್ಡಿ ಗ್ಯಾಂಗ್ ಮಂಗಳೂರಿನಲ್ಲಿ ಮನೆಗಳ ಮೇಲೆ ನಡೆಸಿದ ದರೋಡೆ ಪ್ರಕರಣ ಮಾಸುವ ಮುನ್ನವೇ ನಿನ್ನೆ ಮಧ್ಯರಾತ್ರಿ ಮಂಡ್ಯ ಜಿಲ್ಲೆಯಲ್ಲೂ ಮನೆಯೊಂದರ ಮೇಲೆ ದರೋಡೆ ಕೃತ್ಯ ನಡೆಸಿದೆ.
ಈ ಚಡ್ಡಿ ಗ್ಯಾಂಗ್ ದರೋಡೆ ಕೋರರು ಮೈಸೂರಿಗೂ ಸಹ ಬರಬಹುದು ಎಂದು ನಾಗರಿಕರು ಭಯಗೊಂಡಿದ್ದಾರೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಮೈಸೂರಿನಲ್ಲಿ ನೈಟ್ ಬೀಟ್ ಹೆಚ್ಚಿಸಬೇಕು ಎಂದು ಮೈಸೂರು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರಿಗೆ ತೇಜಸ್ವಿ ಮನವಿ ಮಾಡಿದ್ದಾರೆ.
ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿ ಗಸ್ತು ತಿರುಗುವ ಪಾಳಿಗೆ (ನೈಟ್ ಬಿಟ್) ಹೆಚ್ಚು ಪೋಲಿಸ್ ಸಿಬ್ಬಂದಿಗಳನ್ನು ನೇಮಿಸಿ ನಾಗರಿಕರು ಆತಂಕಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸಬೇಕು ಎಂದು ಮನವಿ ಕೋರಿದ್ದಾರೆ.
ಮೈಸೂರಿನ ಹೊಸ ಬಡಾವಣೆಗಳು ಮತ್ತು ನಿರ್ಜನ ಪ್ರದೇಶದಲ್ಲಿ ಹೆಚ್ಚಾಗಿ ನೈಟ್ ಬೀಟ್ ಮಾಡುವ ಮೂಲಕ ಚಡ್ಡಿ ಗ್ಯಾಂಗ್ ಮಟ್ಟ ಹಾಕಬೇಕು ಎಂದು ಕನ್ನಡ ತೇಜಸ್ವಿ ನಾಗಲಿಂಗ ಸ್ವಾಮಿ ಪೋಲಿಸ್ ಇಲಾಖೆಗೆ ಮನವಿ ಮಾಡಿದ್ದಾರೆ.