ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣಗಳನ್ನು ಹೆಚ್ಚು ಅಭಿವೃದ್ಧಿ ಪಡಿಸಿ ಹೆಚ್ಚು ಪ್ರವಾಸಿಗರು ಬರುವಂತೆ ಮಾಡಬೇಕು ಹಾಗೂ ಇಲ್ಲಿನ ಜನರಿಗೆ ಜೀವನ ವ್ಯಾಪಾರ ವಹಿವಾಟು ಹೆಚ್ಚಿಸಿ ಸ್ಥಳಿಯರಿಗೆ ಅನುಕೂಲವಾಗಬೇಕು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು
ಎಂದು ಶಾಸಕರು ಹೊಗೇನಕಲ್ ಜಲಪಾತ ವೀಕ್ಷಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆ ಗಡಿರಾಜ್ಯ ತಮಿಳುನಾಡು ಹೊಗೇನಕಲ್ ಜಲಪಾತಕ್ಕೆ ಭೇಟಿ ನೀಡಿ ಅಲ್ಲಿನ ಪ್ರವಾಸೋದ್ಯಮದ ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ತಮಿಳುನಾಡಿನ ಪ್ರವಾಸೋದ್ಯಮ ಅಧಿಕಾರಿ ಕದರೇಶ್ ರವರು ಶಾಸಕರಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಸನ್ಮಾನಿಸಿದರು.
ಮುಂದಿನ ದಿನದಲ್ಲಿ ಅಗತ್ಯ ಕ್ರಮ ಕೈಗೊಂಡು ನಮ್ಮ ವ್ಯಾಪ್ತಿಯ ಪ್ರವಾಸಿ ತಾಣಗಳನ್ನು ಪರಿಶೀಲನೆ ಮಾಡಿ ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳದಲ್ಲಿ ಜಿಲ್ಲಾಧಿಕಾರಿಗಳಿಗೆ ಶಾಸಕರು ಮನವಿ ಮಾಡಿದರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ ಬಿಟಿ ಕವಿತಾ, ಡಿಸಿಎಫ್ ಸಂತೋಷ ಕುಮಾರ್ ಉಪವಿಭಾಗಾಧಿಕಾರಿ ಬಿ, ಆರ್ ಮಹೇಶ್.ಡಿವೈಎಸ್ಪಿ ಧರ್ಮೇಂದ್ರ,ಡಿಡಿ ತಮನ್ ಪಾಟೀಲ್, ತಹಶೀಲ್ದಾರ್ ಗುರುಪ್ರಸಾದ್, ಇನ್ಸ್ ಪೆಕ್ಟರ್ ಜಗದೀಶ್,ಆರ್ ಐ ಶಿವಕುಮಾರ್, ಪಿಡಿಒ ರಾಜ್ ಕುಮಾರ್ ಹಾಗೂ ಶಾಸಕರ ಬೆಂಬಲಿಗರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್