ಬೆಂಗಳೂರು : ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ ಇವರುಗಳ ಸಂಯುಕ್ತಶ್ರಯದಲ್ಲಿ ಸರ್ ಎಂವಿ ಆಡಿಟೋರಿಯಂ, ಎಫ್‌ಕೆಸಿಸಿಐ, ಶತಮಾನೋತ್ಸವ ಭವನದಲ್ಲಿ ಮಹಿಳಾ ಉದ್ಯಮಿಗಳ ಸಮಾವೇಶವು ಇತ್ತೀಚಿಗೆ ಬಹು ಅದ್ದೂರಿಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಸೌಮ್ಯಾ ರೆಡ್ಡಿ, ಅಧ್ಯಕ್ಷರು, ಕೆಪಿಸಿಸಿ, ಮಹಿಳಾ ವಿಭಾಗ, ಬೆಂಗಳೂರು ಇವರು ಆಗಮಿಸಿ ತಮ್ಮ ಅಮೋಘವಾದ ವಾಘಝರಿಯಿಂದ ಸಭಾಂಗಣವನ್ನು ಮಂತ್ರ ಮುಗ್ಧವಾಗಿಸಿದರಲ್ಲದೆ ವಿವಿಧ ಸಾಧಕ ಮಹಿಳೆಯರನ್ನು ಶಾಲು ಹಾಗೂ ಪ್ರಶಸ್ತಿ ಫಲಕಗಳಿಂದ ಗೌರವಿಸಿದರು.
ಗೌರವ ಅತಿಥಿಗಳಾಗಿ ಪದ್ಮಶ್ರೀ ಡಾ. ಪ್ರೇಮಾ ಧನರಾಜ್, ಪ್ಲಾಸ್ಟಿಕ್ ಸರ್ಜನ್ ಮತ್ತು ಮುಖ್ಯಸ್ಥರು ಪುನರ್ನಿರ್ಮಾಣ ಮತ್ತು ಪ್ಲಾಸ್ಟಿಕ್ ಸರ್ಜರಿ ಇಲಾಖೆ ಹಾಗೂ ಶ್ರೀಮತಿ ರೇಚೆಲ್ ಡೇವಿಡ್, ದಕ್ಷಿಣ ಭಾರತದ ಸಿನಿ ನಟಿ ಇವರುಗಳು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಎಂ ಜಿ ಬಾಲಕೃಷ್ಣ, ಅಧ್ಯಕ್ಷರು, ಕರ್ನಾಟಕ ವಾಣಿಜ್ಯ ಉದ್ಯಮಿಗಳ ಸಂಘ ಇವರು ವಹಿಸಿದ್ದು ಮಹಿಳಾ ಸಾಧಕರಿಗೆ ಯಥಾವತ್ತಾಗಿ ಸನ್ಮಾನಿಸಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾಟ್ಯಭೈರವಿ ನೃತ್ಯ ಶಾಲೆ ಇದರ ವಿದ್ಯಾರ್ಥಿಗಳು ಬಹು ಮನೋಜ್ಞಾವಾಗಿ ಅಭಿನಯಿಸಿ ಪ್ರೇಕ್ಷಕರ ಮನತುಂಬಿಸಿದರು.
ಬೆಳಿಗ್ಯೆ 11ರಿಂದ ಸಂಜೆ 7ರವರೆಗೆ ಮಹಿಳಾ ಉದ್ಯಮಿಗಳಿಂದ ಪ್ರೆರೇಪಿತ (SHE INSPIRED) ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು ಸಾರ್ವಜನಿಕರಿಗೆ ಉಪಯುಕ್ತ ವಸ್ತುಗಳು ಮಾರಾಟಕ್ಕೆ ಒದಗಿಸಲಾಗಿತ್ತು.
ಶ್ರೀಮತಿ ಉಮಾ ರೆಡ್ಡಿ,ಸೀನಿಯರ್ ಉಪಾಧ್ಯಕ್ಷರು, ಶ್ರೀ ಟಿ ಸಾಯಿರಾಮ್ ಪ್ರಸಾದ್, ಉಪಾಧ್ಯಕ್ಷರು, ಶ್ರೀ ರಮೇಶ್ ಚಂದ್ರ ಲಹೋಟಿ, ಈ ಹಿಂದಿನ ಅಧ್ಯಕ್ಷರು, ಮತ್ತು ಡಾ.ಮಧುರಾಣಿ ಗೌಡ, ಅಧ್ಯಕ್ಷರು, FKCCI,ಮಹಿಳಾ ವಿಭಾಗ ಹಾಗೂ ಡಾ. ಪೆರಿಕಲ್ ಎಂ ಸುಂದರ್, ಹಿಂದಿನ ಅಧ್ಯಕ್ಷರು, FKCCI ಮತ್ತು ಸಲಹೆಗಾರರು ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ