ವಿಜಯನಗರ / ಕೊಟ್ಟೂರು : ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆ ನಡೆಯುತ್ತಿದ್ದು, ಅದರ ಜೊತೆ ಅಜೀಂ ಪ್ರೇಮ್ ಜೀ ಫೌಂಡೇಷನ್ ಸಹ ಭಾಗಿತ್ವದಲ್ಲಿ ಪೂರಕ ಪೌಷ್ಠಿಕ ಆಹಾರವಾದ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ ಮಾಡಲಾಗುತ್ತಿದೆ ಸದರಿ ಪೂರಕ ಪೌಷ್ಠಿಕ ಆಹಾರ ವ್ಯವಸ್ಥೆಯನ್ನು ಮಾಡಲು ಮುಖ್ಯಗುರುಗಳು ಮಾರುಕಟ್ಟೆಗೆ ಹೋಗಿ ಖರೀದಿ ಮತ್ತು ಸಾಗಾಣಿಕೆ ಮಾಡಬೇಕಾಗಿರುತ್ತದೆ ಇದರಿಂದ ಗುಣಾತ್ಮಕ ಶಿಕ್ಷಣ ನೀಡಲು ಅಡಚಣೆಯಾಗುತ್ತಿದೆ ಆದ್ದರಿಂದ ಬಿಸಿಯೂಟದ ಜೊತೆ ನೀಡುವ ಪೂರಕ ಪೌಷ್ಠಿಕ ಆಹಾರಗಳನ್ನು ಖರೀದಿ, ಸಾಗಾಣಿಕೆ ಹಾಗೂ ವಿತರಣೆ ಜವಾಬ್ದಾರಿಯಿಂದ ಮುಕ್ತಗೊಳಿಸಿ ಈ ಜವಾಬ್ದಾರಿಯನ್ನು ಬೇರೆ ವ್ಯಕ್ತಿಗಳಿಗೆ ಅಥವಾ ಸಂಘ ಸಂಸ್ಥೆಗಳಿಗೆ ವಹಿಸಿ ಸರ್ಕಾರಿ ಶಾಲಾ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢ ಶಾಲಾ ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘದಿಂದ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಮಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮುತ್ತೇಶ, ನಾಗೇಶ ಪಿ, ಶಶಿಕಲಾ ಕೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿದ್ದಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ- ಯೋಗೀಶ್ವರ ದಿನ್ನೆ, ಉಪಾಧ್ಯಕ್ಷ- ಸಿದ್ದಪ್ಪ ಜಿ, ರಾಜ್ಯಪರಿಷತ್ ಸದಸ್ಯರಾದ ಎಸ್ ಎಂ ಗುರುಬಸವರಾಜ, ಕಾರ್ಯದರ್ಶಿ- ರಮೇಶ ಕೆ, ಜಂಟಿ ಕಾರ್ಯದರ್ಶಿ- ಶಿವಕುಮಾರ್ ಎಂ, ಸಂಘಟನಾ ಕಾರ್ಯದರ್ಶಿ- ಗುರುಬಸವರಾಜ ಎ ವಿ, ಚನ್ನೇಶಪ್ಪ , ಮುಖ್ಯಗುರುಗಳು ಹಾಗೂ ಸಹಶಿಕ್ಷಕರು ಹಾಜರಿದ್ದರು.
