ತುರ್ವಿಹಾಳ: ಕೆ.ಹೊಸಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀ ವೀರಭದ್ರಪ್ಪ ಶಿವಶರಣರ 68ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ತುಂಬಾ ಅದ್ದೂರಿಯಾಗಿ ನೆರವೇರಿತು.
ಸುಮಾರು 150ವರ್ಷಗಳಿಂದ ಕೆ.ಹೊಸಹಳ್ಳಿ ಹಾಗೂ ನಾಗಲಾಪೂರ ಗ್ರಾಮದ ಭಕ್ತರು ಸೇರಿಕೊಂಡು ಪ್ರತಿವರ್ಷ ಎಳ್ಳ ಅಮವಾಸ್ಯೆ ಎರಡು ದಿನ ಮುಂಚಿತವಾದ ದಿನದಂದು ಮಹಿಳೆಯರು ಕುಭ ಕಳಸಗಳೊಂದಿಗೆ ಕಳಸಾರೋಹಣ ಮಾಡಿ ಸಾವಿರಾರು ಭಕ್ತರಿಗೆ ಪ್ರಸಾದ ನೆರವೇರಿಸುವರು.
ಇಂದು ಬುಧವಾರ ಬೆಳಗ್ಗೆ ಶ್ರೀ ವೀರಭದ್ರಪ್ಪ ಶಿವಶರಣರ ಗದ್ದಗೆಗೆ ರುದ್ರಾಭಿಷೇಕ,ಪುಷ್ಪಾಲಂಕಾರ, ಹಾಗೂ ಗಣಾಂಗಳ ಪಾದ ಪೂಜೆ ಮಾಡಿ ಕಳಸಾರೋಹಣ ಮಾಡಿದರು. ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಆಗಮಿಸಿದ ಸರ್ವಭಕ್ತರಿಗೆ ನಿರಂತರವಾಗಿ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುತ್ತಗಯ್ಯ ಹಿರೇಮಠ,ಪಂಪಣ್ಣ ಶಿಕ್ಷಕರು, ಭೀರಪ್ಪ ಶಿಕ್ಷಕರು,ವೀರೇಶ ಶಿಕ್ಷಕರು,ಮಲ್ಲಪ್ಪ ಕಲ್ಮಂಗಿ,ಪಕೀರಯ್ಯ ಸ್ವಾಮಿ, ನಾಗಪ್ಪ ಬಡಿಗೇರ, ಶರಣಪ್ಪ ಕಲ್ಮಂಗಿ, ಶಿವಯ್ಯ ಸ್ವಾಮಿ,ಚನ್ನಪ್ಪ ವಿಶ್ವಕರ್ಮ ಹಾಗೂ ನಾಗಲಾಪೂರ ಹಾಗೂ ಕೆ.ಹೊಸಹಳ್ಳಿ ಭಕ್ತ ವೃಂದದವರು ಭಾಗವಹಿಸಿದ್ದರು