ಭಾರತ ನನ್ನ ತಾಯಿನಾಡು!
ಬುದ್ಧ, ಬಸವ-ಅಂಬೇಡ್ಕರ್,ಸಾಹು, ಫುಲೆ,ಪೇರಿಯಾರ್,ಕನಕ, ಕುವೆಂಪು… ಇಂತಹ ಇನ್ನೂ ಅನೇಕ ಜನ ಮಾಹ ಪುರುಷರು-ಸಮಾಜಸುಧಾರಕರು ಹುಟ್ಟಿದ ಪುಣ್ಯ ಭೂಮಿ ನನ್ನದು!
ಶ್ರೀಮಂತಿಕೆಯ ತವರೂರು ಆಗಿದ್ದ ಈ ನನ್ನ ದೇಶ ಇವತ್ತು ಏನಾಗಿದೆ…?
ಪ್ರಪಂಚದ ಬಡವರ ರಾಜಧಾನಿವೆಂಬ ಕುಖ್ಯಾತಿ ಪಡೆದಿದೆ.
ಜಾತ್ಯತೀತ ರಾಷ್ಟ್ರ ಭಾರತ, ಜಾತಿವಾದಿಗಳ ಭಾರತವಾಗಿ ವಿಜೃಂಭಿಸುತ್ತಿದೆ.
ಜಾತಿ…ದೇವರು, ಧರ್ಮದ ಹೆಸರಿನಲ್ಲಿ ಅಧರ್ಮ ತಾಂಡವಾಡುತ್ತಿದೆ!
ಭ್ರಷ್ಟಾಚಾರ ಗಹಿಗಯಿಸಿ ನಗುತ್ತಿದೆ.
ಅನ್ಯಾಯ, ಅತ್ಯಾಚಾರ, ಮೋಸ- ವಂಚನೆ, ಕೊಲೆ, ದರೋಡೆ… ನಿತ್ಯ ನಿರಂತರವಾಗಿ ನಡೆಯುತ್ತಿದೆ ಇಲ್ಲಿ!
ಇದಕ್ಕೆಲ್ಲ ಕಾರಣ ಯಾರು?
“ಭಾರತವು ಜಾತ್ಯಾತೀತ ರಾಷ್ಟ್ರ… ಇಲ್ಲಿ ಹಿಂದೂ, ಜೈನ, ಸಿಖ್, ಮುಸ್ಲಿಂ, ಕ್ರಿಸ್ತ, ಪಾರ್ಸಿ, ಲಿಂಗಾಯತ ಹಾಗೂ ವಿವಿಧ ಬುಡಕಟ್ಟು ಧರ್ಮ ಮತ್ತು ಆಚರಣೆಗಳ ಜನ ವಾಸವಾಗಿದ್ದಾರೆ. ಅವರವರ ವೇಶ-ಭಾಷೆ, ರೀತಿ – ನೀತಿ ಬೇರೆಬೇರೆಯಾಗಿದ್ದರೂ ಸಹ ನಾವೆಲ್ಲರೂ ಒಂದೇ ಎಂಬ ಏಕತೆ ಭಾವ ಅವರಲ್ಲಿದೆ . ವಿವಿಧತೆಯಲ್ಲಿ ಏಕತೆಯುಳ್ಳ ರಾಷ್ಟ್ರ ಈ ಭಾರತ…! ಸಂಸ್ಕೃತ ಭಾಷೆ ಮತ್ತು ವೈದಿಕ ಸಾಹಿತ್ಯ, ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳು ಭಾರತೀಯರಲ್ಲಿ ಏಕತೆಯ ಭಾವವನ್ನು ತುಂಬಿವೆ”ಎಂದು ಇತಿಹಾಸದ ಪಾಠ ಹೇಳುತ್ತದೆ. ಇದೆಲ್ಲ ನಿಜವೇ?
ಇಲ್ಲ… ನಿಜ ಅಲ್ಲ! ಬರೀ ಸುಳ್ಳು… ಇದೆಲ್ಲಾ ಪುಸ್ತಕದ ಬದನೆಕಾಯಿ ತುಂಬು! ಸತ್ಯ ಹೇಳಲು ನಾಚಿಕೆ ಉಂಟಾಗಿ, ಆತ್ಮವಂಚನೆ ಮಾಡಿಕೊಂಡು ಹೇಳುವ ಮಾತಿದು…! ಸತ್ಯ ಹೇಳಬೇಕು ಅಂದರೆ ಈ ದೇಶದ ಜನಕ್ಕೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋಲ್ಲ! ಇವರು ಉದ್ದಾರ ಆಗಲ್ಲ!! ಬೇರೆಯವರಿಗೂ ಉದ್ದಾರ ಆಗಲು ಬಿಡಲ್ಲ ಈ ಜನ!!!
ದಿನ ಬೆಳಗಾದರೆ ಸಾಕು, ಜಾತಿ- ಧರ್ಮ, ಭಾಷೆ ಎಂದು ಕಿತ್ತಾಡುತ್ತಿರುತ್ತಾರೆ ಅನಾಗರಿಕ ಮೌಢ್ಯ ಜನ.
“ಈ ವೈದಿಕ ಸಾಹಿತ್ಯದಿಂದಲೇ ಮೂಢನಂಬಿಕೆ ಬೆಳೆದು ಕೆಲ ಜನರ ವ್ಯಕ್ತಿತ್ವ ಕುಂಠಿತಗೊಂಡಿದೆ”ಎಂದು ಹೇಳಿದರೆ ತಪ್ಪಾಗಲಾರದು ಸ್ನೇಹಿತ ಬಂಧುಗಳೇ…
“ಸಾಲ ಏಕ್ ಮಚ್ಚರ್ ಆದ್ಮಿ ಇಂನ್ಸಾನ್ಕೂ ಹಿಜಡಾ ಬನಾ ದೇತಾಹೈ!”ಹಿಂದಿ ಚಿತ್ರನಟ ನಾನಾ ಪಾಟೇಕರ್ ಡೈಲಾಗ್ ನಂತೆ-
“ದುಡಿದು ತಿನ್ನಲಾಗದ ಒಬ್ಬ ನಪುಂಸಕ ಪುರಾಣಗಳು ಬರೆದು ಇಡೀ ದೇಶವನ್ನೇ ನಪುಂಸಕನಾಗಿ ಮಾಡಿದ”ಎಂದು ಹೇಳಿದರೆ ತಪ್ಪಾಗಲಾರದು ಬಂಧುಗಳೇ…
ಮಠ-ಮಂದಿರಗಳಲ್ಲಿ ಕುಳಿತು ದೇವರ ಹೆಸರು ಹೇಳುತ್ತಾ ಮಡಿ- ಮೈಲಿಗೆ ಎಂದು ಮೇಲು-ಕೀಳು, ವರ್ಣ-ಅಸ್ಪೃಶ್ಯತೆ ಆಚರಿಸುತ್ತಿರುವ ಡಾಂಭಿಕ ಜನರಿಗೆ ನನ್ನ ಕೆಲ ಪ್ರಶ್ನೆಗಳು-
೧.ಮಹಮ್ಮದ್ ಬಿನ್ ಖಾಸಿಂ ಮತ್ತು ಘಜ್ನಿ ಮಹಮ್ಮದರಂಥ ಮುಸ್ಲಿಮರು ಹತ್ತಾರು ಬಾರಿ ನಿಮ್ಮ ದೇವಾಲಯಗಳನ್ನು ಧ್ವಂಸಗೊಳಿಸಿ ಅಪಾರವಾದ ಸಂಪತ್ತನ್ನು ಲೂಟಿಮಾಡಿ ತಮ್ಮ ದೇಶಕ್ಕೆ ಹೊತ್ತೊಯ್ಯುವಾಗ, ಪರಮ ಶಕ್ತಿಯುಳ್ಳ ನಿಮ್ಮ ದೇವರಗಳು ಅವರನ್ನು ಯಾಕೆ ತಡೆಯಲಿಲ್ಲ?
೨.ಅಲ್ಲಾವುದ್ದೀನ್ ಖಿಲ್ಜಿ ಅಂತಹವರು ನಿಮ್ಮ ಹುಟ್ಟಡಗಿಸಿ, ನಿಮ್ಮ ಹೆಂಡತಿ- ಮಕ್ಕಳನ್ನು ಬಲಾತ್ಕರಿಸಿ, ನಿಮ್ಮ ರಾಜ್ಯ ತಮ್ಮದಾಗಿಸಿಕೊಂಡಿರಲ್ಲ,ಆಗ ನಿಮ್ಮ ಪೌರುಷ ಎಲ್ಲಿ ಹೋಗಿತ್ತು?
೩.ನಿಮ್ಮ ಪರಾಕ್ರಮ ಕೇವಲ ಶೂದ್ರ- ದಲಿತ ಜನರಿಗೆ ಮಾತ್ರ ಮೀಸಲಾಗಿತ್ತಾ-ಹೇಗೆ?
ಥೂ… ಧಿಕ್ಕಾರವಿರಲಿ ನಿಮ್ಮಂಥ ನಪುಂಸಕರಿಗೆ! ಬಹುಜನ ಭಾರತೀಯರು ಜಾಗೃತಗೊಳ್ಳುವ ಕಾಲ ಸನಿಹವಾಗುತ್ತಿದೆ. ಇನ್ನೂ ಕಾಲ ಮಿಂಚಿಲ್ಲ; ಈಗಲಾದರೂ ಶೀಘ್ರದಲ್ಲಿಯೇ ಎಚ್ಚೆತ್ತುಕೊಂಡು ಠಕ್ಕ ನರಿಯಂತೆ ಬಾಳುವುದನ್ನು ನಿಲ್ಲಿಸಿ ಒಳ್ಳೆ ಮನುಷ್ಯರಾಗಿ ಬಾಳಲು ಪ್ರಯತ್ನಿಸಿ… ಇಲ್ಲಾಂದ್ರೆ ನಿಮಗೆ ಉಳಿಗಾಲ ಇಲ್ಲ!
- ಜಿ ಎಲ್ ನಾಗೇಶ್
