ಶಿವಮೊಗ್ಗ : ರಾಜ್ಯ ಸರ್ಕಾರದ ಅತ್ಯಂತ ಚುರುಕಿನ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರು ಇಂದು ಶಿವಮೊಗ್ಗದಲ್ಲಿ ತಮ್ಮ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀ ಆರ್ ಎಂ ಮಂಜುನಾಥ ಗೌಡ ಅವರು ಹೊಸ ವರ್ಷದ ಶುಭಾಶಯಗಳು ಕೋರಿದರು.
ಮಾನ್ಯ ಶಾಸಕರು ಹಾಗೂ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬೇಳೂರು ಗೋಪಾಲಕೃಷ್ಣ, ಲೋಕಸಭಾ ಸದಸ್ಯ ಶ್ರೀ ಬಿ ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಸ್ ಬಾನು ಶ್ರೀ ಸಿಟಿ ಕೋ ಆಪರೇಟಿವ್ ನಿರ್ದೇಶಕ ಶ್ರೀ ಎಸ್ ಕೆ ಮರಿಯಪ್ಪ ಅವರನ್ನು ಚಿತ್ರದಲ್ಲಿ ಕಾಣಬಹುದು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
