
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಅಂಬೇಡ್ಕರ್ ವೃತ್ತದಲ್ಲಿ ಪಾವಗಡ ಗಡಿನಾಡು ಮಿತ್ರ ಸಂಪಾದಕರಾದ ಎ ರಾಮಾಂಜಿನಪ್ಪನವರ ಮೇಲೆ ಹೆಂಗಸರನ್ನು ಚೂ ಬಿಟ್ಟು ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ.
ಈ ಹಲ್ಲೆಗೆ ಮುಖ್ಯ ಕಾರಣ ಏನಿರಬಹು ಎಂದು ತಿಳಿಯುತ್ತಾ ಹೋದರೆ ಅಸಲಿ ಕಾರಣ ಗೊತ್ತಾಗಿದೆ ವಿಷಯ ಏನೆಂದರೆ ಕೆಲ ದಿನಗಳ ಹಿಂದೆ ರಾಮಾಂಜಿನಪ್ಪ ನವರು ಪಾವಗಡ ತಾಲ್ಲೂಕಿನ ಅಪ್ಪಾಜಿ ಹಳ್ಳಿ ಗ್ರಾಮದ ನಾರಾಯಣ ರೆಡ್ಡಿ ಎಂಬುವನ ಅಕ್ರಮ ಸಂಬಂಧದ ಬಗ್ಗೆ ವರದಿ ಮಾಡಿದ್ದರು ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾರಾಯಣ ರೆಡ್ಡಿ ಪ್ಲಾನ್ ಮಾಡಿ ಗುರುವಾರ ರಾಮಾಂಜಿನಪ್ಪ ನವರ ಚಲನವಲನ ಗಮನಿಸಿ, ಹಿಂಬಾಲಿಸಿ ಜನದಟ್ಟಣೆಯ ಪ್ರದೇಶದಲ್ಲಿ ಸಾರ್ವಜನಿಕವಾಗಿ ಹಾಡಹಗಲೇ ತನ್ನ ಹೆಂಡತಿ ಮತ್ತು ಅತ್ತಿಗೆಯರನ್ನು ರಾಮಾಂಜಿನಪ್ಪನವರ ಮೇಲೆ ಚೂ ಬಿಟ್ಟು ಹಲ್ಲೆ ನಡೆಸಿದ್ದಾರೆ
ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಅಮಾನವೀಯ ಘಟನೆಗೆ ಖಂಡನೆ ವ್ಯಕ್ತವಾಗುತ್ತಿದ್ದು
ಕೆಲ ಸಾರ್ವಜನಿಕರು ನಾವು ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೀವಾ ಅಥವಾ ಸರ್ವಾಧಿಕಾರಿ ಅಡಳಿತದಲ್ಲಿ ಇದ್ದೀವಾ ? ಇಲ್ಲಿ ಒಬ್ಬ ಪತ್ರಕರ್ತರ ಸ್ಥಿತಿ ಹೀಗಿರುವಾಗ ಇನ್ನು ಸಾಮಾನ್ಯ ಜನರ ಸ್ಥಿತಿ ಏನಾಗಿರಬೆಕು ಎಂದು ಸಾರ್ವಜನಿಕರು ಭಯಭೀತರಾಗಿದ್ದು ಇಂದು ಪಾವಗಡ ತಾಲ್ಲೂಕಿನ ಪತ್ರಕರ್ತರು ಹಾಗೂ ಸಂಘಟನೆಗಳ ಮುಖಂಡರು ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುವ ಮೂಲಕ ಪಾವಗಡ ದಂಡಾಧಿಕಾರಿಗಳಾದ ವರದರಾಜ ರವರಿಗೆ ಮತ್ತು ಪಾವಗಡ ವೃತ್ತ ನಿರೀಕ್ಷಕರಾದ ಸುರೇಶ್ ರವರಿಗೆ ಮನವಿ ಪತ್ರವನ್ನು ನೀಡಿದರು.
ಮನವಿ ಸ್ವೀಕರಿಸಿದ ದಂಡಾಧಿಕಾರಿಗಳು ಈ ಘಟನೆ ನಡೆಯಬಾರದಿತ್ತು ಈ ಘಟನೆಯ ವಿಷಯ ಸಂಬಂಧ ಅಧಿಕಾರಿಗಳ ಜೊತೆ ಮಾತನಾಡಿ ಡಿ ಸಿ ರವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕಿನ ಪತ್ರಕರ್ತರು ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
