ಬಿಜ್ಜರಗಿಯಲಿ ಜನಿಸಿ ಬಂದ ದೇವರೆ
ವಿಶ್ವಕ್ಕೆ ಗುರುವಾಗಿ ಬೆಳಕು ನೀಡಿದವರೆ
ಸಾವಿರ ಪ್ರವಚನ ನೀಡಿದ ಪಿತಾಮಹರೆ
ಭಗವಂತನ ಪ್ರತಿರೂಪವು ಸಿದ್ಧೇಶ್ವರರೆ
ನಿಮಗಿದೋ ನನ್ನ ಕೋಟಿ ನಮನ.
ಎಲ್ಲ ಬಲ್ಲ ಸರ್ವಜ್ಞ ಸಮಾನರಾದ
ಸರಳ ಜೀವನವ ಬಯಸಿ ಸಾಗಿದ
ಭೋಗ ಭಾಗ್ಯಗಳ ತ್ಯಜಿಸಿ ಬಾಳಿದ
ಹೆಣ್ಣು ಹೊನ್ನು ಮಣ್ಣು ನಶ್ವರ ಎಂದ
ನಿಮಗಿದೋ ನನ್ನ ಕೋಟಿ ನಮನ.
ಶುಭ್ರ ಮನಸ್ಸಿನ ಜ್ಞಾನ ಯೋಗಿಯೇ
ಕಿಸೆಯೇ ಇಲ್ಲದ ಶ್ವೇತ ವರ್ಣಧಾರಿಯೆ
ಕಿಂಚಿತ್ತೂ ಇಂಗದ ಶ್ರೇಷ್ಠ ವಿದ್ವಾಂಸಿಯೆ
ಜಗದಿ ಅಮರವಾಗಿ ಉಳಿದ ಯೋಗಿಯೆ
ನಿಮಗಿದೋ ನನ್ನ ಕೋಟಿ ನಮನ.
ಬಸವನ ತತ್ವವ ಪಾಲಿಸಿದ ಶೀಲರೆ
ಭಕ್ತರ ಪಾಲಿಗೆ ಧರೆಗಿಳಿದ ದೇವರೆ
ಆಧ್ಯಾತ್ಮ ಶಕ್ತಿ ಸ್ಪೂರ್ತಿ ನೀಡಿದವರೆ
ಹೊನ್ನಂತೆ ಹೊಳೆದು ಮರೆಯಾದವರೆ
ನಿಮಗಿದೋ ನನ್ನ ಕೋಟಿ ನಮನ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ : 9740199896.
