ನಿನ್ನೆ ಜೇವರ್ಗಿ ನಗರದ ಓಂ ನಗರ ಬಡಾವಣೆಯ ನಿವಾಸಿ ಕು. ಮಹಾಲಕ್ಷ್ಮೀ ಬಿರಾದಾರ ವಿದ್ಯಾರ್ಥಿನಿಯ ಆತ್ಮಹತ್ಯೆ ಕುರಿತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ವತಿಯಿಂದ ಹಾಗೂ ವಿವಿಧ ಸಂಘಟನೆ ಮುಖಂಡರಿಂದ ಇಂದು ಜೇವರ್ಗಿ ನಗರದ ಷಣ್ಮುಖ ಶಿವಯೋಗಿಗಳ ಮಠದಲ್ಲಿ ಸುದ್ಧಿಗೋಷ್ಠಿ ನಡೆಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ರಾಜ್ಯ ಕಾರ್ಯದರ್ಶಿ ರಾಜಶೇಖರ ಸೀರಿ ನಮ್ಮ ಸಮುದಾಯದ ವಿದ್ಯಾರ್ಥಿನಿಯ ಮೇಲೆ ಅನ್ಯ ಕೋಮಿನ ಯುವಕ ಕೊಟ್ಟ ಮಾನಸಿಕ ಕಿರುಕುಳದಿಂದ ಬೇಸತ್ತು ಕುಟುಂಬದ ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಇಡೀ ನಾಗರೀಕ ಸಮುದಾಯ ತಲೆ ತಗ್ಗಿಸುವ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಸಮಾಜದ ಮುಖಂಡರಾದ ಬಸವರಾಜ ಪಾಟೀಲ ನರಿಬೋಳ ಕುಮಾರಿ ಮಹಾಲಕ್ಷ್ಮೀ ಆತ್ಮಹತ್ಯೆಗೆ ಕಾರಣನಾದ ಯುವಕನನ್ನು ಸರ್ಕಾರ ನೇರವಾಗಿ ಗಲ್ಲಿಗೆ ಏರಿಸಬೇಕು ಮೃತ ವಿದ್ಯಾರ್ಥಿನಿಯ ಸಹೋದರನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಹಾಗೂ 59 ಲಕ್ಷ ಪರಿಹಾರ ಘೋಷಣೆ ಮಾಡಬೇಕು, ಕುಟುಂಬದವರಿಗೆ ಸೂಕ್ತ ಭದ್ರತೆ ಕೊಡಲು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಇದೇ ತಿಂಗಳು 16ನೇ ತಾರೀಖು ಗುರುವಾರದಂದು ಜೇವರ್ಗಿ ಪಟ್ಟಣ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ತಾಲ್ಲೂಕು ಅಧ್ಯಕ್ಷ ಸಿದ್ದು ಅಂಗಡಿ, ಗುರುಲಿಂಗಪ್ಪಗೌಡ ಆಂದೋಲಾ, ಷಣ್ಮುಖಪ್ಪ ಗೋಗಿ, ಬಾಪುಗೌಡ ಪಾಟೀಲ ಬಿರಾಳ,ಷಣ್ಮುಖಪ್ಪ ಹಿರೇಗೌಡ, ರವಿ ಕೋಳಕೂರ, ಗುರುಗೌಡ ಮಾಲಿ ಪಾಟೀಲ, ಸಂಗನಗೌಡ ರದ್ದೇವಾಡಗಿ, ಶಿವುಕುಮಾರ ಕಲ್ಲಾ, ಮಲ್ಲಿಕಾರ್ಜುನ ಬಿರಾದಾರ, ಗುರುಲಿಂಗಯ್ಯ ಯನಗುಂಟಿ, ಭಗವಂತರಾಯ ಶಿವಣ್ಣೋರು, ಪ್ರಭುಗೌಡ ಗುಳ್ಯಾಳ, ಶಿವಲಿಂಗ ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ ಪಾಟೀಲ್ ಗುಡೂರ ಎಸ್ ಎನ್
