ಶಿವಮೊಗ್ಗ/ ಸಾಗರ : ನಿನ್ನೆ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಕೃಷಿ ಮಂತ್ರಿಗಳಾದ ಸನ್ಮಾನ್ಯ ಶಿವರಾಜ್ ಸಿಂಗ್ ಚೌಹಾಣ್ ರವರು ರೈತರು ಮತ್ತು ವರ್ತಕರೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಸಾಗರದ ಶ್ರೀ ಶೃಂಗೇರಿ ಶಂಕರ ಮಠದ ಧರ್ಮದರ್ಶಿಗಳು, ಅಡಿಕೆ ವರ್ತಕರು ಹಾಗೂ ಉಪಾಧ್ಯಕ್ಷರು ಕರ್ನಾಟಕ ಅರೇಕಾ ಛೇಂಬರ್ ಆಫ್ ಕಾಮರ್ಸ್ ಅಶ್ವಿನ್ ಕುಮಾರ್ SRT ರವರು ಭಾಗವಹಿಸಿ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಸಚಿವರಿಗೆ ಮನದಟ್ಟು ಆಗುವಂತೆ ವಿವರಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಬಿ ವೈ ರಾಘವೇಂದ್ರ, ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿರವರು, ಸಾಗರ ಶಾಸಕರು ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಗೋಪಾಲಕೃಷ್ಣ ಬೇಳೂರು, ನಿಕಟಪೂರ್ವ ಶಾಸಕರಾದ ಹೆಚ್ ಹಾಲಪ್ಪನವರು ಸಂಘಟನೆಯ ಪ್ರಮುಖರುಗಳಾದ ಟಿ.ಡಿ ಮೇಘರಾಜ್ ವ. ಶಂ ರಾಮಚಂದ್ರ ಭಟ್, ಪ್ರಸನ್ನ ಕೆರೆ ಕೈ, ಕಲಸೆ ಚಂದ್ರಪ್ಪ, ಬಿ.ಹೆಚ್. ಲಿಂಗರಾಜು, ವಕೀಲರಾದ ಕೆ.ವಿ.ಪ್ರವೀಣ್ ಇನ್ನೂ ಅನೇಕ ಪ್ರಮುಖರು ಭಾಗವಹಿಸಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
