ಶನಿವಾರ ಡಿಸೆಂಬರ್ 17, 2022 ರಂದು ದೊಡ್ಡಬಳ್ಳಾಪುರ (ತಾ) ಹಣಬೆ ಪ್ರೌಢಶಾಲೆಯ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಲ್ಲಿ ನೋಡಿದರೂ ಹಳೆ ವಿದ್ಯಾರ್ಥಿಗಳು ಅವರ ಕುಟುಂಬಗಳಿಂದ ಸಂತೋಷ ತುಂಬಿತ್ತು.
ಪ್ರತಿಯೊಬ್ಬರೂ ಕುಟುಂಬ ಪರಿಚಯ ಮಾಡಿಕೊಂಡು ಹಸ್ತಲಾಘವ ಮಾಡಿ ಸಂಭ್ರಮಿಸುತ್ತಿದ್ದರು.
28 ವರ್ಷ 9 ತಿಂಗಳ ನಂತರ ಮೊದಲ ಬಾರಿಗೆ ನಮ್ಮ ಕಾರ್ಯಕ್ರಮದಲ್ಲಿ ಭೇಟಿಯಾದ ಶಿಕ್ಷಕರು ತುಂಬಾ ಖುಷಿಯಿಂದ ತಮ್ಮ ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು.
ಶಿಕ್ಷಕರು ಭಾವುಕರಾಗಿ ಹಳೆವಿದ್ಯಾರ್ಥಿಗಳ ಈ ಕಾರ್ಯಕ್ರಮವನ್ನು ಮೆಚ್ಚಿ ಕೊಂಡಾಡಿದರು,
ಶಾಲೆಯ ಅಂಗಳ ಹಸಿರಿನಿಂದ ಕಂಗೊಳಿಸುತ್ತಿತ್ತು.
ಬಾಳೆಕಂದು ಸ್ವಾಗತ ಕೋರುತ್ತಿತ್ತು
ಮಾವಿನ ತೋರಣದಿಂದ ಶಾಲೆಯ ಆವರಣ ವಿಜೃಂಭಿಸುತ್ತಿತ್ತು.
ಘಮ ಘಮಿಸುವ ಬಗೆಬಗೆಯ ಭೋಜನ ತಯಾರಾಗುತ್ತಿತ್ತು. ಇನ್ನೊಂದು ಕಡೆ 1993 -1994 ನೇ ಸಾಲಿನ ವಿದ್ಯಾರ್ಥಿಗಳು, ಗುರುವಂದನಾ ಕಾರ್ಯಕ್ರಮ ಇತಿಹಾಸ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು.
ಗುರುವಂದನೆ ಕಾರ್ಯಕ್ರಮ ಆರ್,ಜಿ, ವೆಂಕಟಾಚಲಯ್ಯನವರ ಅಧ್ಯಕ್ಷತೆಯಲ್ಲಿ (ಮಾಜಿ ಶಾಸಕರು ಹಣಬೆ) ನಡೆಯುತ್ತಿತ್ತು
ನಮ್ಮ ಜನಪ್ರಿಯ ಹಾಲಿ ಶಾಸಕರಾದ.ಟಿ,ವೆಂಕಟರಮಣಯ್ಯನವರ ಸಮ್ಮುಖದಲ್ಲಿ ನಮ್ಮ ಗುರುಗಳಾದ ಎ,ಜಿ,ಮಂಜುನಾಥ್,ಎನ್ ನಾರಾಯಣಪ್ಪ ,ಎಂ ಕೆಂಪರಾಜು ,ಸಿಪಿ ಶ್ರೀನಿವಾಸ್,ಪಾಲ್ ವಿಜಯಕುಮಾರ್ ವೀಣಾ ,ಎಸ್,ಎಸ್ ಇವರುಗಳ ಆಶೀರ್ವಾದದೊಂದಿಗೆ..
ಇದೇ ಸಂದರ್ಭದಲ್ಲಿ ವಿ ಶ್ರೀನಿವಾಸ್ ಬರೆದಿರುವ “ಕೊರೋನ ಮಾಡಿದ ಕಿತಾಪತಿ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವೆಂಕಟರಾಮಯ್ಯನವರು ದೊಡ್ಡಬಳ್ಳಾಪುರ (ವಿದಾನಸಬಾ ಕ್ಷೇತ್ರ)ಇವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆಮಾಡಿದರು.
ಹಣಬೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಖಮರ್ ಸುಲ್ತಾನ್ ರವರು ಶಿಕ್ಷಕರಾದ ಕೆಂಪೇಗೌಡರು ಮತ್ತು ವಾಸು ಮಾದರ್ ಮತ್ತು ಸಹಶಿಕ್ಷಕರು ನಮ್ಮ ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು,
ನಮ್ಮ ಗುರುಗಳಾದ ಕೆಂಪರಾಜ್
ನನ್ನ ಶಿಷ್ಯ ಈ ರೀತಿಯ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಕವಿತೆ ಪುಸ್ತಕ ಬರೆದಿರುವುದು ತುಂಬಾ ಖುಷಿ ತಂದಿದೆ, ಇನ್ನೂ ತುಂಬಾ ಎತ್ತರಕ್ಕೆ ಬೆಳೆಯಲಿ ಎಂದು ಆಶೀರ್ವಾದ ಮಾಡಿದರು.
ಶಾಲೆಯ 8 9 10ನೇ ತರಗತಿಯ ವಿದ್ಯಾರ್ಥಿಗಳು ಸಂಯಮ ಸಹಕಾರ ಸಮಯ ಪರಿಪಾಲನೆ ಅದ್ಬುತ ಅವರು ಖುಷಿ ಖುಷಿಯಿಂದ ಇದ್ದ ಕ್ಷಣಗಳು ಇದಕ್ಕೆಲ್ಲ ಸಹಕಾರ ನೀಡಿದ ಹಣಬೆ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ
ಇದಕ್ಕೆಲ್ಲ ತುಂಬಾ ಶ್ರಮಪಟ್ಟ ಕೆಂಪರಾಜ್, ಕೆ,ರಾಜು,ಚಿಕ್ಕನಹಳ್ಳಿ ,ವೆಂಕಟೇಶ್ ಬೊಮ್ಮನಹಳ್ಳಿ ,ಎಂ ರವಿಕುಮಾರ್ ಜಾಲಗೆರೆ, ವಿ ಶ್ರೀನಿವಾಸ ವಾಣಿಗರಹಳ್ಳಿ ,ಶ್ರೀನಿವಾಸ ಜಿಕೆ ಗುಂಡಸಂದ್ರ ,ಶ್ರೀಧರ,ಹೆಚ್.ವಿ ರುದ್ರಮೂರ್ತಿ, ರಂಗನಾಥ ಮತ್ತು ಎಲ್ಲಾ ಗೆಳಯರ ಸಹಕಾರದಿಂದ ಕಾರ್ಯಕ್ರಮ ಅದ್ಬುತವಾಗಿ ಮೂಡಿಬಂದಿತು
ವಿ,ಶ್ರೀನಿವಾಸ,ವಾಣಿಗರಹಳ್ಳಿ,
ದೊಡ್ಡಬಳ್ಳಾಪುರ (ತಾ).