ಯಾದಗಿರಿ: ವಡಗೇರಾ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವಲ್ಲಿ ಜಿಲ್ಲಾ ಆಡಳಿತ ಸಂಪೂರ್ಣವಾಗಿ ವಿಫಲಗೊಂಡಿದೆ. ಎಂದು ಅಲ್ಲಿನ ನಾಗರಿಕರು ಮತ್ತು ಸಾಮಾಜಿಕ ಹೋರಾಟಗಾರ ಹಣಮಂತ ಭಂಗಿ ಅವರು ಬೇಸರ ವ್ಯಕ್ತಪಡಿಸಿದ್ದರು.
ಸರ್ವೆ ನಂಬರ್ ೯ ಹಾಗೂ ೪ ರಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದು ಕೃಷ್ಣಾ ನದಿಯಲ್ಲಿ ಟೆಂಡರ್ ಇಲ್ಲದೆ ಜಮೀನಿನ ಮಾಲೀಕರಾದ ಅನ್ನಪೂರ್ಣ ಗಂ/ ಬಸವರಾಜಪ್ಪ ಗೌಡ ಶರಣಗೌಡ ತಂ/ ಬಸವರಾಜಪ್ಪ ಗೌಡ ಮಾದೇವಪ್ಪ ಗೌಡ ತಂ/ ಬಸವರಾಜ ಗೌಡ, ವಿಶ್ವನಾಥ್ ತಂ/ ಬಸವರಾಜಪ್ಪ ಗೌಡ ಇವರುಗಳು ಅಕ್ರಮ ಮರಳು ದಂಧೆಕೋರರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ತಮ್ಮ ಜಮೀನಿನಲ್ಲಿ ಕೃಷ್ಣಾ ನದಿಯಿಂದ ಅಕ್ರಮ ಮರಳು ಸಾಗಾಣಿಕೆ ಮಾಡಲು ತಮ್ಮ ಜಮೀನಿನಲ್ಲಿ ದಾರಿ ಕೊಟ್ಟಿದ್ದಾರೆ ಇವರ ವಿರುದ್ಧ ಮಾನ್ಯ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
ಮಾನ್ಯ ಗೌರವಾನ್ವಿತ ಉಚ್ಚ ನ್ಯಾಯಾಲಯದ ಡಬ್ಲ್ಯೂ. ನಂಬರ್ ೧೧೯೮೪ ನ್ಯಾಯಾಲಯದಲ್ಲಿ ಕೇಸು ಇದ್ದರೂ ಸಹ ಕಾನೂನಿಗೆ ಗೌರವ ಕೊಡದೆ ಅಕ್ರಮ ಮರಳು ಸಾಗಾಣಿಕೆ ನಿರಂತರವಾಗಿ ನಡೆಸಿದ್ದಾರೆ
ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡುತ್ತಾ ಕುಮ್ಮಕ್ಕು ನೀಡುತ್ತಿದ್ದಾರೆ. ಮಾನ್ಯ ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಯಾದಗಿರಿ ವಡೆಗೇರಾ ಪಿಎಸ್ಐ ಯಾದಗಿರಿ ಡಿವೈಎಸ್ಪಿ ಯಾದಗಿರಿ ಎಸ್ಪಿ ಹಾಗೆಯೇ ವಡೆಗೇರಾ ತಾಲೂಕ ದಂಡಾಧಿಕಾರಿ ಸುರೇಶ್ ಅಂಕಲಗಿ ಎಲ್ಲಾ ಅಧಿಕಾರಿಗಳು ಮರಳು ದಂಧೆಕೋರರಿಂದ ಅಕ್ರಮ ಮರಳು ಸಾಗಾಣಿಕೆ
ಮಾಡಲು ೫೨ ಲಕ್ಷಕ್ಕೂ ಹೆಚ್ಚು ಹಣ ಪಡೆದು ಟೆಂಡರ್ ಇಲ್ಲದೆ. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಇವರ ಪಾಲು ೨೫ ಲಕ್ಷ ಯಾದಗಿರಿ ಜಿಲ್ಲೆ ಎಸ್ಪಿ ಅವರಿಗೆ ೫ ಲಕ್ಷ ಮತ್ತು ಯಾದಗಿರಿ ಜಿಲ್ಲಾಧಿಕಾರಿಗಳಿಗೆ ೫ ಲಕ್ಷ ಯಾದಗಿರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ೫ ಲಕ್ಷ ಯಾದಗಿರಿ ಎಸಿ.ಗೆ ೩ ಲಕ್ಷ ಯಾದಗಿರಿ ಡಿವೈಎಸ್ಪಿ ಯವರಿಗೆ ೩ ಲಕ್ಷ ವಡೆಗೇರಾ ತಾಲೂಕ ದಂಡಾಧಿಕಾರಿಗಳಿಗೆ ೩ ಲಕ್ಷ ವಡೆಗೇರಾ ಪಿಎಸ್ಐ ಗೆ ೩ ಲಕ್ಷ ಜಿಲ್ಲಾ ಆಡಳಿತ ಅಧಿಕಾರಿಗಳು ಹಾಗೂ ಬಿಜೆಪಿ ಸರ್ಕಾರವು ಕೂಡಾ ಇದರಲ್ಲಿ ಭಾಗಿಯಾಗಿದ್ದು ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ನಾಯಕರು ಕೂಡ ಇದರಲ್ಲಿ ಭಾಗಿಯಾಗಿದ್ದು ಎಲ್ಲರೂ ಹಗಲು ದರೋಡೆಗೆ ಯತ್ನಿಸುತ್ತಿದ್ದಾರೆ ಎಂದು ಹಣಮಂತ ಭಂಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ